ಭಾರತೀಯ ಆಧ್ಯಾತ್ಮಿಕ ಪರಂಪರೆ ವಿಶ್ವಕ್ಕೆ ಮಾದರಿ

6Itagi1
ಇಟಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶಿವನಾಮ ಸಪ್ತಾಹದಲ್ಲಿ ಗ್ರಾಪಂ ಅಧ್ಯಕ್ಷ ರುದ್ರಪ್ಪ ತುರಮರಿ ಮಾತನಾಡಿದರು. ಶಿವಪುತ್ರ ಸ್ವಾಮೀಜಿ, ಶರೀಫ ಶಿವಯೋಗಿ ಶಾಸ್ತ್ರಿ, ಮಹಾದೇವಿ ಕುಲಾರಕೊಪ್ಪ , ಬಸನಗೌಡ ಪಾಟೀಲ ಇತರರಿದ್ದರು.
Published on

ಇಟಗಿ: ಭರತ ಭೂಮಿಯಲ್ಲಿ ಜನಿಸಿದ ಅನೇಕ ಮಹಾತ್ಮರ ತತ್ತ್ವಗಳು ಮಾನವಕುಲದ ಒಳಿತು ಬಯಸಿ ವಿಶ್ವ ಆಧ್ಯಾತ್ಮಿಕ ಪರಂಪರೆಗೆ ಮಾದರಿಯಾಗಿವೆ ಎಂದು ಇಟಗಿ ಗ್ರಾಪಂ ಅಧ್ಯಕ್ಷ ರುದ್ರಪ್ಪ ತುರಮರಿ ಹೇಳಿದರು.

ಗ್ರಾಮದ ಸಿದ್ದಾರೂಢ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ 109ನೇ ಶಿವನಾಮ ಸಪ್ತಾಹ ಹಾಗೂ ಅಖಿಲ ಕರ್ನಾಟಕ ವೇದಾಂತ ಪರಿಷತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧುನಿಕತೆ ಹಾಗೂ ಜಾಲತಾಣಗಳ ಪ್ರಭಾವದ ಮಧ್ಯೆ ಸಿದ್ಧಾರೂಢ ಮಠದಲ್ಲಿ ನಿರಂತರವಾಗಿ ಶಿವನಾಮ ಸಪ್ತಾಹ ನಡೆಯುತ್ತಿರುವುದು ನಾಡಿನ ಅಧ್ಯಾತ್ಮ ಸಂಸ್ಕೃತಿಗೆ ಸಂದ ಗೌರವ ಎಂದರು.

ಚಿಕ್ಕಮುನವಳ್ಳಿ ಆರೂಢಮಠದ ಶಿವಪುತ್ರ ಸ್ವಾಮೀಜಿ, ಶರೀಫ ಶಿವಯೋಗಿ ಶಾಸ್ತ್ರಿ, ಬಸನಗೌಡ ಪಾಟೀಲ, ಕಡತನ ಬಾಗೇವಾಡಿ ಗ್ರಾ ಪಂ ಅಧ್ಯಕ್ಷೆ ಮಹಾದೇವಿ ಕುಲಾರಕೊಪ್ಪ, ಈರಣ್ಣ ಕಾದ್ರೊಳ್ಳಿ, ಸದೆಪ್ಪ ಗೌರಕ್ಕನವರ, ಬಸವರಾಜ ತಳವಾರ, ಮಣ್ಣಪ್ಪ ಅಳ್ಳಾವಾಡ, ಸದೆಪ್ಪ ವಳಕೇರಿ, ಸಂಜು ಕೆಳಗೇರಿ, ಫಕೀರಪ್ಪ ಗೂರನವರ, ಶಿವಲಿಂಗ ತಳವಾರ, ಚಿಕ್ಕಪ್ಪ ಗೂರನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net