ಭಾರತೀಯ ವೇದಾಂತಿಗಳ ದಿನಾಚರಣೆ

Philosopher
Published on

ಬೆಂಗಳೂರು: ಭಾರತೀಯ ವೇದಾಂತಿಗಳ ದಿನಾಚರಣೆ ಅಂಗವಾಗಿ ನಗರದ ಶ್ರೀ ಭಗವಾನ್ ಮಹಾವೀರ್ ಜೈನ್ ಸಂಜೆ ಕಾಲೇಜಿನ ಸಂಸ್ಕೃತ ವಿಭಾಗವು ದೆಹಲಿಯ ಪ್ರತಿಷ್ಠಿತ ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ಇಂಡಿಯನ್ ಕೌನ್ಸಿಲ್ ಆಫ್ ಫಿಲೋಸೋಫಿಕಲ್ ರೀಸರ್ಚ್ (ಐಸಿಪಿಆರ್) ಸಹಯೋಗದಲ್ಲಿ ಜೂ.29ರ ಸಂಜೆ 5 ಗಂಟೆಗೆ ಕಾಲೇಜಿನ ಸಮ್ಮೇಳನ ಸಭಾಂಗಣದಲ್ಲಿ ‘ರಾಷ್ಟ್ರಮಟ್ಟದ ವೇದಾಂತ ಕಮ್ಮಟ’ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ತ್ರಿಪುರಾ ಕೇಂದ್ರೀಯ ವಿಶ್ವವಿದ್ಯಾಲಯದ ವಿಶೇಷ ನಿರ್ವಹಣಾಧಿಕಾರಿ ಹಾಗೂ ಸಂಸ್ಕೃತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುಮನ್ ಆಚಾರ್ಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಉಪನ್ಯಾಸಕ ಗುರುರಾಜ ರಾವ್, ಕಲಬುರಗಿಯ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿವಿಯ ಭಾಷಾನಿಕಾಯದ ಮುಖ್ಯಸ್ಥ ಡಾ. ಮಂಜುನಾಥ್ ಪಾಳ್ಯ ಹಾಗೂ ವಾಗ್ಮಿ ವೈ.ವನಿತಾ ವಿಶೇಷ ಉಪನ್ಯಾಸ ನೀಡಲಿದ್ದಾರೆ. ವೇದಾಂತದ ವಿವಿಧ ಆಯಾಮಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದೊಂದಿಗೆ ಕಾಲೇಜಿನ ಸಂಸ್ಕೃತಿ ವಿಭಾಗವು ಈ ಕಮ್ಮಟ ಆಯೋಜಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net