

ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಚೆನ್ನೈನಲ್ಲಿರುವ ಕಂಟ್ರೋಲ್ ಆಫೀಸ್ನಲ್ಲಿ 24 ಸೆಕ್ಯೂರಿಟಿ ಗಾರ್ಡ್ ಹುದ್ದೆಗಳ ಭತಿರ್ಗೆ ಮಾಜಿ ಸೈನಿಕ ಅಭ್ಯಥಿರ್ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
24 ಹುದ್ದೆಗಳ ಪೈಕಿ ಎಸ್ಸಿ-4, ಎಸ್ಟಿ-1, ಒಬಿಸಿ-6, ಇಡಬ್ಲ್ಯುಎಸ್-2, ಸಾಮಾನ್ಯ-11 ಹುದ್ದೆಗಳಿವೆ. ಅಭ್ಯಥಿರ್ಗಳು 10ನೇ ತರಗತಿ / ತತ್ಸಮಾನ ಪಾಸಾಗಿರಬೇಕು. ಪ್ರಾದೇಶಿಕ ಭಾಷಾ ಜ್ಞಾನ ಹೊಂದಿರಬೇಕು. ಸೇನಾ ಪಡೆ ತೊರೆಯುವವರೆಗೂ ಆದರ್ಶಪ್ರಾಯ ನಡತೆ ಹೊಂದಿರಬೇಕು. ನಿಗದಿತ ವೈದ್ಯಕಿಯ ಅರ್ಹತೆಯನ್ನು ಹೊಂದಿರಬೇಕು.
ಚೆನ್ನೈ ನಿವಾಸಿಯಾಗಿರುವ ಮಾಜಿ ಸೈನಿಕ ಅಭ್ಯಥಿರ್ಗಳು ಅರ್ಜಿ ಸಲ್ಲಿಸಬಹುದು. ಅಭ್ಯಥಿರ್ಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಸ್ತುನಿಷ್ಠ ಮಾದರಿ ಆನ್ಲೈನ್ ಪರೀಕ್ಷೆ ಹಾಗೂ ದೈಹಿಕ ಅರ್ಹತಾ ಪರೀಕ್ಷೆ ಇರುತ್ತದೆ, ಆಯ್ಕೆಯಾದ ಅಭ್ಯಥಿರ್ಗಳಿಗೆ ಮಾಸಿಕ 9560 ರೂ. ದಿಂದ 18545 ರೂ. ಮಾಸಿಕ ವೇತನ ಇರುತ್ತದೆ.
ಆನ್ಲೈನ್ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷಾಜ್ಞಾನ (ತಮಿಳು), ಇಂಗ್ಲಿಷ್ ಭಾಷಾ ಜ್ಞಾನ, ಅಪ್ಟಿಟ್ಯುಡ್ , ಅಂಕಗಣಿತ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ ಇರುತ್ತವೆ. ಅಭ್ಯಥಿರ್ಗಳು ಕನಿಷ್ಠ 18 ವರ್ಷ ವಯೋಮಿತಿ ಪೂರೈಸಿರಬೇಕು. ಅರ್ಹ ಮತ್ತು ಆಸಕ್ತ ಅಭ್ಯಥಿರ್ಗಳು ಏಪ್ರಿಲ್ 10 ರೊಳಗೆ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ https://bit.ly/2V0kwTG