ಬೆಳಗಾವಿಯಲ್ಲಿ ಸಕ್ಷಮ್ ಸೈಕಲ್ ಜಾಥಾ: ಪೆಟ್ರೋಲಿಯಂ ಸಂರಕ್ಷಣಾ ಅನುಸಂಧಾನ ಸಂಘ ಹಾಗೂ ಇಂಡಿಯನ್ ಆಯಿಲ್ ಆಯೋಜನೆ

sakshama rally belagavi 19 JAN 20
Published on

ಬೆಳಗಾವಿ: ಪೆಟ್ರೋಲಿಯಂ ಸಂರಕ್ಷಣಾ ಅನುಸಂಧಾನ ಸಂಘ ಹಾಗೂ ಇಂಡಿಯನ್ ಆಯಿಲ್ ಆಯೋಜಿಸಿರುವ ಸೈಕಲ್ ಬಳಸಿ, ಇಂಧನ-ಪರಿಸರ ಉಳಿಸಿ ಸಕ್ಷಮ್ ಸೈಕಲ್ ಜಾಥಾಗೆ ನಗರದ ಆರ್,ಪಿ.ಡಿ ವೃತ್ತದಲ್ಲಿ ಸಾಗರ್ ಮುದೋಳ ಅವರು ಚಾಲನೆ ನೀಡಿದರು.

ನಗರದ ವಿವಿಧ ಶಾಲಾ-ಕಾಲೇಜುಗಳಿಂದ ಸುಮಾರು ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಆರ್ಪಿಡಿ ವೃತ್ತದಿಂದ ಆರಂಭವಾದ ಸೈಕಲ್ ಜಾಥಾ ಗೋಗಟೆ ಕಾಲೇಜು, ಜೈನ್ ಪಿಯು ಕಾಲೇಜು, ಹಿಂಡವಾಡಿ,ಸುಭಾಷ್ ಮಾರ್ಕೆಟ್, ಮುನ್ಸಿಪಲ್ ಕಾರ್ಪೋರೇಷನ್ ಕಟ್ಟಡ, ಗೋವಾ ವೇಸ್ ಮಾರ್ಗವಾಗಿ ಒಟ್ಟು ೨.೫ ಕಿಲೋ ಮೀಟರ್ ದೂರ ಕ್ರಮಿಸಿ ಮತ್ತೆ ಇಂಡಿಯನ್ ಕಚೇರಿ ಆವರಣಕ್ಕೆ ಆಗಮಿಸಿ ರ್ಯಾಲಿ ಸಂಪನ್ನಗೊಂಡಿತು.‌

ಇಂಡಿಯನ್ ಆಯಿಲ್ ಸಂಸ್ಥೆಯ ವಿಭಾಗೀಯ ಅಧಿಕಾರಿ ವಿನಯಕುಮಾರ್, ನಿತಿನ್ ಗಡ್ಗೆ, ಮಣಿಕಾಂತ್ ಎಚ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net