ಮುದಗಾದಲ್ಲಿ ವಸತಿ ಸಮುಚ್ಛಯ ಉದ್ಘಾಟಿಸಿದ ನೌಕಾಸೇನೆ ಮುಖ್ಯಸ್ಥ

Navy-Program
Published on

ಕಾರವಾರ: ಅಮದಳ್ಳಿಯ ಮುದಗಾದಲ್ಲಿ ನಿರ್ಮಾಣವಾದ 10 ವಸತಿ ಸಮುಚ್ಛಯದ ಬಹು ಮಹಡಿ ಕಟ್ಟಡಗಳನ್ನು ಭಾರತೀಯ ನೌಕಾಸೇನೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ ಸೋಮವಾರ ಲೋಕಾರ್ಪಣೆ ಮಾಡಿದರು.
ಸೀಬರ್ಡ್ ನೌಕಾ ಯೋಜನೆಯ 2ಎ ವಿಸ್ತರಣೆಯ ಭಾಗವಾಗಿ ಒಟ್ಟು 10 ಸಾವಿರ ಸಮವಸ್ತ್ರಧಾರಿ ಹಾಗೂ ಸಿವಿಲಿಯನ್ ನೌಕರರಿಗೆ ವಸತಿ ಸಮುಚ್ಛಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಅದರ ಭಾಗವಾಗಿ 10 ಸಮುಚ್ಛಯಗಳಲ್ಲಿ ಒಟ್ಟು 600 ಮನೆಗಳು ಈಗ ಉದ್ಘಾಟನೆಗೊಂಡಿವೆ. ಆಧುನಿಕ ಸೌಲಭ್ಯಗಳು, ಮಾನ್ಯತೆ ಪಡೆದ ಒಳಾಂಗಣ ಸೌಲಭ್ಯವನ್ನು ಒಳಗೊಂಡಿವೆ.

Navy-Program1

ಇದನ್ನೂ ಓದಿ:ಚಂದ್ರಯಾನ ಲ್ಯಾಂಡಿಂಗ್​ ದಿನಾಂಕದಲ್ಲಿ ಆಗಲಿದೆಯಾ ಬದಲಾವಣೆ?; ಇಲ್ಲಿದೆ ಲೇಟೆಸ್ಟ್ ಅಪ್​ಡೇಟ್..
ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸುವವರಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ರಕ್ಷಣಾ ಸಚಿವರ ಕಾರ್ಯಕ್ರಮ ರದ್ದಾಗಿದ್ದು, ನೌಕಾಸೇನೆ ಮುಖ್ಯಸ್ಥರು ಉದ್ಘಾಟನೆ ಮಾಡಿದ್ದಾರೆ. ಕರ್ನಾಟಕ ನೌಕಾವಲಯ ಮುಖ್ಯಸ್ಥ ಕೆ.ಎಂ.ರಾಮಕೃಷ್ಣ ಇದ್ದರು.

Navy Program2
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net