ಭಾರತೀಯ ಮುಸಲ್ಮಾನರು ಅಪ್ಪಟ ದೇಶ ಪ್ರೇಮಿಗಳು

ಕೂಡ್ಲಿಗಿ ಹೊರವಲಯದ ಕಾವೇರಿ ನಗರದ ಬಳಿ ರಾಜ್ಯ ಮುಸ್ಲಿಂ ಸಂಘದ ಕೇಂದ್ರ ಕಚೇರಿ ಉದ್ಘಾಟನಾ ಕಾರ್ಯಕ್ರಮವನ್ನು ಸಂಘದ ರಾಜ್ಯಾಧ್ಯಕ್ಷ ಎಲ್.ಎಸ್.ಬಷೀರ್ ಸಾಹೇಬ್ ಉದ್ಘಾಟಿಸಿದರು. ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯರು, ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್, ಕ್ರಾಂತಿಕಾರಿ ಕವಿ ಹಜರತ್ ಅಬ್ದುಲ್ ಕರೀಮ್ ಹಾಶೀಮ್ ಪೀರ್ ದೇಸಾಯಿ, ಕನ್ನಡ ಸೇನೆ ರಾಜ್ಯಧ್ಯಕ್ಷ ಕೆ.ಆರ್.ಕುಮಾರ್, ಪ್ರಮುಖರಾದ ಡೆವಿಡ್ ಫಾದರ್, ಗಂಗಾವತಿಯ ಬಾಬಾಖಾನ್ ಸಾಹೇಬ್, ಮಾದಿಹಳ್ಳಿ ನಜೀರ್ ಇತರರಿದ್ದರು.
ಕೂಡ್ಲಿಗಿ ಹೊರವಲಯದ ಕಾವೇರಿ ನಗರದ ಬಳಿ ರಾಜ್ಯ ಮುಸ್ಲಿಂ ಸಂಘದ ಕೇಂದ್ರ ಕಚೇರಿ ಉದ್ಘಾಟನಾ ಕಾರ್ಯಕ್ರಮವನ್ನು ಸಂಘದ ರಾಜ್ಯಾಧ್ಯಕ್ಷ ಎಲ್.ಎಸ್.ಬಷೀರ್ ಸಾಹೇಬ್ ಉದ್ಘಾಟಿಸಿದರು. ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯರು, ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್, ಕ್ರಾಂತಿಕಾರಿ ಕವಿ ಹಜರತ್ ಅಬ್ದುಲ್ ಕರೀಮ್ ಹಾಶೀಮ್ ಪೀರ್ ದೇಸಾಯಿ, ಕನ್ನಡ ಸೇನೆ ರಾಜ್ಯಧ್ಯಕ್ಷ ಕೆ.ಆರ್.ಕುಮಾರ್, ಪ್ರಮುಖರಾದ ಡೆವಿಡ್ ಫಾದರ್, ಗಂಗಾವತಿಯ ಬಾಬಾಖಾನ್ ಸಾಹೇಬ್, ಮಾದಿಹಳ್ಳಿ ನಜೀರ್ ಇತರರಿದ್ದರು.
Published on

ಕೂಡ್ಲಿಗಿ: ಭಾರತೀಯ ಮುಸಲ್ಮಾನರು ಅಪ್ಪಟ ದೇಶ ಪ್ರೇಮಿಗಳು. ಅವರನ್ನು ಅನುಮಾನಿಸದಿರಿ ಎಂದು ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್ ಹೇಳಿದರು.

ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬಳಿ ಕರ್ನಾಟಕ ಮುಸ್ಲಿಂ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ಮುಸ್ಲಿಂ ಸಂಘದ ಕೇಂದ್ರ ಕಚೇರಿ ಹಾಗೂ ಮಹನೀಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಾತಂತ್ರೃಕ್ಕಾಗಿ ಮುಸ್ಲಿಂ ಸಮುದಾಯದವರು ಕೂಡ ಹೋರಾಟ ನಡೆಸಿದ್ದಾರೆ. ಕರೆ ಕೊಟ್ಟರೆ ಇಂದಿಗೂ ಶತ್ರುರಾಷ್ಟ್ರ ಪಾಕಿಸ್ತಾನದ ವಿರುದ್ಧ ಹೋರಾಟಕ್ಕೆ ಸಿದ್ದ. ಮುಸಲ್ಮಾನರನ್ನು ಅನುಮಾನದಿಂದ ನೋಡಬೇಡಿ ನಾವು ಭಾರತೀಯರೇ. ಇಲ್ಲಿನ ನೆಲ, ಜಲ ರಕ್ಷಣೆಗೆ ಪ್ರಾಣ ತ್ಯಾಗಕ್ಕೂ ಸಿದ್ದ ಎಂದರು. ಇತ್ತೀಚೆಗೆ ಪಹಾಲ್ಗಾಮ್‌ನಲ್ಲಿ ನಡೆದ ನರಮೇಧದಲ್ಲಿ 26 ಅಮಾಯಕರ ಪ್ರಾಣ ತೆಗೆದ ಉಗ್ರರ ಕೃತ್ಯವನ್ನು ಖಂಡಿಸುತ್ತೇವೆ. ನಾವು ಶ್ರಮಿಜೀವಿಗಳು ಕನಿಷ್ಠ ಕಾಯಕದೊಂದಿಗೆ ಜೀವನೋಪಯ ಕಂಡುಕೊಂಡರೂ ಅಣ್ಣತಮ್ಮಂದಿರಂತೆ ಭಾತೃತ್ವ ದಿಂದ ಜೀವಿಸುವ ಅಪ್ಪಟ ಭಾರತೀಯ ಮುಸಲ್ಮಾನರಾಗಿದ್ದೇವೆ. ಸ್ವಾತಂತ್ರದ ನಂತರ ಪಾಕಿಸ್ತಾನ ಬೇಕು ಎಂದು ಹೋದವರು ಅಲ್ಲಿನ ಮುಸಲ್ಮಾನರು. ವಿಶ್ವಕ್ಕೆ ಮಾದರಿಯಾದ ಭಾರತೀಯ ಸಂಸ್ಕೃತಿಗೆ ಭಂಗ ತರುವ ಕೆಲಸ ಮಾಡುವುದಿಲ್ಲ. ಬದಲಿಗೆ ಉಗ್ರರನ್ನು ನೆಲಸಮ ಮಾಡುವ ದಿಟ್ಟ ಕಾರ್ಯಕ್ಕಾಗಿ ಯಾವ ಸಂಧರ್ಭದಲ್ಲಿ ಕರೆದರೂ ಮುಸಲ್ಮಾನರು ಒಗ್ಗಟ್ಟಿನಿಂದ ಸಿದ್ಧರಿದ್ದೇವೆ ಎಂದು ತಿಳಿಸಿದರು.

ಕರ್ನಾಟಕ ಮುಸ್ಲಿಂ ಸಂಘದ ರಾಜ್ಯಾಧ್ಯಕ್ಷ ಎಲ್.ಎಸ್.ಬಷೀರ್ ಅಹಮದ್ ಮಾತನಾಡಿ, ದಲಿತ, ಶೋಷಿತ ಹಾಗೂ ಬಡವರ್ಗದವರಿಗೆ ಅನ್ಯಾಯವಾದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಮುಸಲ್ಮಾನರಿಗಾಗಿ ಇರುವ ಸೌಲಭ್ಯಗಳನ್ನು ಕೊಡಬೇಕು. ಸಂವಿಧಾನದ ಆಶಯದಂತೆ ಅನುಕೂಲಗಳನ್ನು ಕಲ್ಪಿಸಬೇಕು ಎಂದರು. ನಂತರ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಎಲ್ಲ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು.

ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪ್ರಶಾಂತ ಸಾಗರ ಶಿವಾಚಾರ್ಯರು, ಕ್ರಾಂತಿಕಾರಿ ಕವಿ ಹಜರತ್ ಅಬ್ದುಲ್ ಕರೀಮ್ ಹಾಶೀಮ್ ಪೀರ್ ದೇಸಾಯಿ, ಕನ್ನಡ ಸೇನೆ ಕರ್ನಾಟಕ ರಾಜ್ಯಧ್ಯಕ್ಷ ಕೆ.ಆರ್.ಕುಮಾರ್, ಶರಣೇಶ್ವರ ವಿದ್ಯಾ ಕೇಂದ್ರದ ಅಧ್ಯಕ್ಷ ಕೆ.ಎಂ.ಶಶಿಧರ, ಕರ್ನಾಟಕ ಮುಸ್ಲಿಂ ಸಂಘದ ರಾಜ್ಯ ಗೌರವಾಧ್ಯಕ್ಷ ಉಡುಪಿ ಸೈಯದ್ ಯಾಸೀನ್ ಹೆಮ್ಮಾಡಿ, ಕಾರ್ಯಧ್ಯಕ್ಷ ಎ.ಜಾಕೀರ್ ಹುಸೇನ್, ಪ್ರಧಾನ ಕಾರ್ಯದರ್ಶಿ ಸೈಯದ್ ಪುರ್ಖಾನ್ ಯಾಸೀನ್ ಹೆಮ್ಮಾಡಿ, ಪ್ರಮುಖರಾದ ಪಿ.ಹೆಚ್.ದೊಡ್ಡರಾಮಣ್ಣ, ಓಂಕಾರ್ ನಾಯ್ಕ, ಮಹಮದ್ ಸಿರಾಜ್, ಇಸ್ಮಾಯಿಲ್, ಮಹಮ್ಮದ್ ಸಾದಿಕ್ ವುಲ್ಲಾ, ಮೊಹಮ್ಮದ್ ಮೋಸೀನ್ ಸಾಬ್, ಡೆವಿಡ್ ಫಾದರ್, ಗಂಗಾವತಿ ಬಾಬಾಖಾನ್ ಸಾಹೇಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net