ಸೂಕ್ತ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ವಾಸಿ; ಡಾ.ಕೆ.ಎನ್.ಮಧುಸೂದನ್

01 gvt 01
ವಿಶ್ವ ಕ್ಯಾನ್ಸರ್ ದಿನ ನಿಮಿತ್ತ ಗಂಗಾವತಿಯ ಗಾಂಧಿ ವೃತ್ತದಲ್ಲಿ ಭಾರತೀಯ ವೈದ್ಯಕೀಯ ಸಂಘ ಮತ್ತು ಮೈತ್ರಿ ವಿಭಾಗ ಏರ್ಪಡಿಸಿದ್ದ ಜಾಗೃತಿ ಜಾಥಾದಲ್ಲಿ ಡಾ.ಕೆ.ಎನ್.ಮಧುಸೂದನ್ ಮಾತನಾಡಿದರು. ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ, ಡಾ.ಎಸ್.ಜಿ.ಅನಿತಾ, ಡಾ.ಸುಲೋಚನಾ ಚಿನಿವಾಲರ್ ಇತರರಿದ್ದರು.
Published on

ಗಂಗಾವತಿ: ಸಕಾಲಕ್ಕೆ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ಗುಣಪಡಿಸಬಹುದು ಎಂದು ಭಾರತೀಯ ವೈದ್ಯಕೀಯ ಸಂಘದ ತಾಲೂಕಾಧ್ಯಕ್ಷ ಡಾ.ಕೆ.ಎನ್.ಮಧುಸೂದನ್ ಹೇಳಿದರು.
ವಿಶ್ವ ಕ್ಯಾನ್ಸರ್ ದಿನ ನಿಮಿತ್ತ ಭಾರತೀಯ ವೈದ್ಯಕೀಯ ಸಂಘ ಮತ್ತು ಮೈತ್ರಿ ವಿಭಾಗದಿಂದ ನಗರದ ಗಾಂಧಿ ವೃತ್ತದಲ್ಲಿ ಶನಿವಾರ ಏರ್ಪಡಿಸಿದ್ದ ಜಾಗೃತಿ ಜಾಥಾದಲ್ಲಿ ಮಾತನಾಡಿದರು.

ಸುಧಾರಿತ ತಂತ್ರಜ್ಞಾನಗಳ ಮೂಲಕ ಕ್ಯಾನ್ಸರ್ ಪತ್ತೆ ಹಚ್ಚಲಾಗುತ್ತಿದ್ದು, ಹುಬ್ಬಳ್ಳಿಯ ತಜ್ಞ ವೈದ್ಯರ ತಂಡ ತಪಾಸಣೆ ನಡೆಸಲಿದೆ. ಶಿಬಿರದಲ್ಲಿ ಸ್ತನ, ಗರ್ಭ ಸೇರಿ ಇತರ ಕ್ಯಾನ್ಸರ್ ತಪಾಸಣೆ ಜತೆಗೆ ಚಿಕಿತ್ಸೆ ಸಲಹೆ ನೀಡಲಾಗುವುದು ಎಂದರು.

ಮೈತ್ರಿ ವಿಭಾಗದ ಅಧ್ಯಕ್ಷೆ ಡಾ.ಸುಲೋಚನಾ ಚಿನಿವಾಲರ್ ಮಾತನಾಡಿ, ಕ್ಯಾನ್ಸರ್ ಬಗ್ಗೆ ಯಾವುದೇ ಭಯ ಬೇಡ. ಚಿಕಿತ್ಸೆ ಮೂಲಕ ಗುಣಪಡಿಸಬಹುದಾಗಿದ್ದು, ಸ್ಥಳೀಯರ ಅನುಕೂಲಕ್ಕಾಗಿ ಏ.2ರಂದು ಐಎಂಎ ಹಾಲ್‌ನಲ್ಲಿ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಜಾಥಾದಲ್ಲಿ ವೈದ್ಯರು ಮತ್ತು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ, ಪದಾಧಿಕಾರಿಗಳಾದ ಡಾ.ವಿ.ವಿ.ಚಿನಿವಾಲರ್, ಡಾ.ಜಿ.ಶಶಿಧರ್, ಡಾ.ಸತೀಶ್ ರಾಯ್ಕರ್, ಡಾ.ಶರಣಬಸವ ಸಂಕನೂರು, ಡಾ.ಮೇಧಾ ಮಲ್ಲನಗೌಡ, ಡಾ.ಎಸ್.ಜಿ.ಅನಿತಾ, ಡಾ.ಮಧುಸೂದನ್, ಡಾ.ಮಂಜುಳಾ, ಡಾ.ವೀಣಾ ಸತೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net