ವೈದ್ಯರ ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ

27 Dwd 1
Published on

ಧಾರವಾಡ: ವೈದ್ಯರ ದೈನಂದಿನ ಒತ್ತಡ ನಿವಾರಿಸಲು ಕ್ರೀಡಾಕೂಟ ಸಹಕಾರಿ. ಇದರಿಂದ ಸಹ ವೃತ್ತಿಪರರೊಂದಿಗೆ ಉತ್ತಮ ಬಾಂಧವ್ಯ ಬೆಳೆಯುತ್ತದೆ ಎಂದು ಜಿಲ್ಲಾ ವೈದ್ಯಾಽಕಾರಿ ಡಾ. ಶಶಿ ಪಾಟೀಲ ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದಿಂದ ಇಲ್ಲಿನ ಮಲ್ಲಸಜ್ಜನ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ ಕ್ರೀಡಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂತಾರಾಷ್ಟಿçÃಯ ಬ್ಯಾಡ್ಮಿಂಟನ್ ಕ್ರೀಡಾಪಟು ಅಭಿಷೇಕ ಯಲಿಗಾರ ಮಾತನಾಡಿ, ಒಬ್ಬ ವ್ಯಕ್ತಿಯೊಂದಿಗೆ ಒಂದು ವರ್ಷ ಮಾತನಾಡುವುದಕ್ಕಿಂತ ಒಂದು ಗಂಟೆ ಆಟವಾಡಿ ಹೆಚ್ಚು ಅರ್ಥ ಮಾಡಿಕೊಳ್ಳಬಹುದು. ೬೫ ವರ್ಷ ಮೇಲ್ಪಟ್ಟವರೂ ಕ್ರೀಡೆಯಲ್ಲಿ ಪಾಲ್ಗೊಂಡಿದ್ದು ಶ್ಲಾಘನೀಯ ಎಂದರು.
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟದ ಅಧ್ಯಕ್ಷ ಡಾ. ಸತೀಶ ಇರಕಲ್ ಮಾತನಾಡಿ, ವೈದ್ಯರು ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಬೇಕು ಎಂದರು.
ಘಟಕದ ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ಕವಿತಾ ಮಂಕಣಿ, ಡಾ. ವಾಣಿ ಇರಕಲ್, ಡಾ. ಸಪನ್ ಡಿ., ಡಾ. ದಿಲೀಪ್ ಕುಲಕರ್ಣಿ, ಡಾ. ವಿಠಲ್ ಖೋಡೆ, ಡಾ. ಜಗದೀಶ ನಿರಡಿ, ಡಾ. ಅಮೃತ ಮಹಾಬಲಶೆಟ್ಟಿ, ಡಾ. ವಿಜಯಾ ನಾಡಕರ್ಣಿ, ಡಾ. ತೃಪ್ತಿ, ಡಾ. ಮೃದುಲಾ, ಡಾ. ಎಂ.ಎA. ಹಿರೇಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net