ಭಾರತೀಯ ಪರಂಪರೆಗಿದೆ ವಿಶ್ವಕರ್ಮರ ಕೊಡುಗೆ

23 HLR 1
Published on

ಹೊಳೆಆಲೂರ: ಭಾರತೀಯ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ವಿಶ್ವಕರ್ಮ ಸಮಾಜದವರು ವಾಸ್ತು ಶಿಲ್ಪಕಲೆ, ಮೂರ್ತಿ ಕೆತ್ತನೆ, ಜನಸಾಮಾನ್ಯರಿಗೆ ಅಗತ್ಯವಾಗಿರುವ ಕೃಷಿ ಪರಿಕರಗಳ ತಯಾರಿಕೆ ಸೇರಿ ಹಲವು ಕ್ಷೇತ್ರಗಳಲ್ಲಿ ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದ್ದಾರೆ ಎಂದು ಜಿಲ್ಲಾ ವಿಶ್ವಕರ್ಮ ನೌಕರರ ಸಂಘದ ಗೌರವಾಧ್ಯಕ್ಷ ಎ.ಎನ್. ಬಡಿಗೇರ ಹೇಳಿದರು.
ಗ್ರಾಮದ ವಿಶ್ವಕರ್ಮ ವಿಕಾಸ ಸಂಸ್ಥೆ, ಗಾಯತ್ರಿ ಮಹಿಳಾ ಮಂಡಳ ಹಾಗೂ ವಿಶ್ವಕರ್ಮ ತರುಣ ಸಂಘದ ಸಹಯೋಗದಲ್ಲಿ ಭಾನುವಾರ ಯಚ್ಚರೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಮಹೋತ್ಸವ, ಸಾಧಕರಿಗೆ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಜೀವಮಾನ ಸಾಧನಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಂಸ್ಕೃತಿ ಪರಂಪರೆಯಲ್ಲಿ ಜಗತ್ತಿಗೆ ವಿಶ್ವಗುರುವಾಗಿರುವ ಭಾರತೀಯ ಸಮಾಜದಲ್ಲಿ ಇತ್ತೀಚೆಗೆ ಪರಸ್ಪರ ಸಹಕಾರ, ಸಾಮರಸ್ಯ ವಾತಾವರಣ ಮಾಯವಾಗಿ ಅಹಿತಕರ ಘಟನೆಗಳು ಜರಗುತ್ತಿವೆ. ನಮ್ಮ ಸಮಾಜ ರಾಜಕೀಯ, ಧಾರ್ಮಿಕವಾಗಿ ಸಂಘಟಿತವಾದರೆ ಮಾತ್ರ ಬಲಾಡ್ಯರಿಂದ ರಕ್ಷಣೆ ಸಿಗುತ್ತದೆ ಎಂದರು.
ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಕಾಳೇಶ ಪೋತದಾರ ಮಾತನಾಡಿ, ವಿಶ್ವಕರ್ಮರಲ್ಲಿ ಅಡಗಿರುವ ಕೌಶಲಕ್ಕೆ ಮೆರುಗು ಬರಬೇಕಾದರೆ ನಮ್ಮ ಸಾಮರ್ಥ್ಯದ ಬಗ್ಗೆ ಅಭಿಮಾನವಿರಬೇಕು. ಇನ್ನುಳಿದ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಉನ್ನತಿ ಸಾಧಿಸಬೇಕು ಎಂದು ಹೇಳಿದರು.
ರವಿಶಂಕರ ಪತ್ತಾರ ಮಾತನಾಡಿದರು. ಕೊಣ್ಣೂರಿನ ಚಕ್ರ ಮಹಿಳಾ ಡೊಳ್ಳಿನ ತಂಡ ಹಾಗೂ ಸಮಾಜದ ಸುಮಂಗಲಿಯರಿಂದ ಪೂರ್ಣಕುಂಭದೊಂದಿಗೆ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ಸಾಗಿತು. 80 ವರ್ಷ ಮೇಲ್ಪಟ್ಟ ಸಮಾಜದ ಅಮರಪ್ಪ ನಾಗಲಿಂಗಪ್ಪ ಬಡಿಗೇರ, ಮಾನವ್ವ ನಾಗಲಿಂಗಪ್ಪ ಪತ್ತಾರ, ಪ್ರತಿಭಾವಂತ ವಿದ್ಯಾರ್ಥಿಗಳಾದ ಐಶ್ವರ್ಯ ಬಡಿಗೇರ, ಪವನ ಪತ್ತಾರ, ಪ್ರಜ್ವಲ ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ಶ್ರೀ ಯಚ್ಚರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಶ್ವಕರ್ಮ ವಿಕಾಸ ಸಂಸ್ಥೆಯ ಅಧ್ಯಕ್ಷ ಪಾಂಡುರಂಗ ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಅಬಕಾರಿ ನಿರೀಕ್ಷಕ ಗಂಗಾಧರ ಬಡಿಗೇರ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಗೋಪಾಲ ಪಂಚಾಳ, ಪ್ರಾಚಾರ್ಯ ವಿನೋದಕುಮಾರ ಸೋನಾರ, ಮೌನೇಶ ಅಕ್ಕಸಾಲಿಗರ, ಯೋಗೇಶ ಕಮ್ಮಾರ, ಬಿ.ಎಂ. ಬಡಿಗೇರ, ಕಾರ್ಯದರ್ಶಿ ಮೌನೇಶ ಬಡಿಗೇರ, ನಾಗರಾಜ ಬಡಿಗೇರ, ಮಂಜುನಾಥ ಬಡಿಗೇರ, ವಿಜಯಲಕ್ಷ್ಮೀ ಯಚ್ಚರಸ್ವಾಮಿಮಠ, ಅನಸೂಯಾ ಬಡಿಗೇರ, ಮೀನಾಕ್ಷಿ ಪತ್ತಾರ, ಸಂತೋಷ ಬಡಿಗೇರ, ರಾಘವೇಂದ್ರ ಬಡಿಗೇರ, ಎಸ್.ಆರ್. ಬಡಿಗೇರ, ಮೀನಾಕ್ಷಿ ಬಡಿಗೇರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net