ಭಾರತೀಯ ಹಬ್ಬಗಳಿಗಿದೆ ವೈಶಿಷ್ಟೃ

15Athani2
Published on

ಅಥಣಿ: ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಪ್ರತಿಯೊಂದು ಹಬ್ಬ-ಹರಿದಿನಗಳಿಗೆ ವಿಶಿಷ್ಟ ಮಹತ್ವವಿದೆ. ಆದರೆ, ಪ್ರಸ್ತುತ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮತನ ಮರೆಯುತ್ತಿದ್ದೇವೆ ಎಂದು ಆರ್‌ಎಸ್‌ಎಸ್ ಬೆಳಗಾವಿ ವಿಭಾಗ ಸಹಾಯಕ ಕಾರ್ಯವಾಹ ಸಂಜಯ ಅಡಕೆ ಹೇಳಿದರು.

ಪಟ್ಟಣದ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖಾ ವಾರ್ಷಿಕೋತ್ಸವ ಹಾಗೂ ಪಥ ಸಂಚಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ

ಮಾತನಾಡಿದರು. ಎಲ್ಲಿವರೆಗೆ ಹಿಂದು ಸಮುದಾಯದ ಜಾತಿ ಜಾತಿಗಳ ಮಧ್ಯೆ ಜಗಳ ನಿಲ್ಲುವುದಿಲ್ಲವೋ, ಅಲ್ಲಿವರೆಗೆ ಒಗ್ಗೂಡುವಿಕೆ ಸಾಧ್ಯವಾಗುವುದಿಲ್ಲ. ದ್ವೇಷ-ಅಸೂಯೆ ಬಿಟ್ಟು ನಾವೆಲ್ಲರೂ ಒಂದು ಎಂಬ ಮನೋಭಾವದಿಂದ ಸಹಬಾಳ್ವೆ ನಡೆಸಬೇಕು ಎಂದರು.

ಪಥ ಸಂಚಲನ: ಪಟ್ಟಣದ ಪ್ರಮುಖ ಬೀದಿಗಳಲ್ಲಿ 350 ಕ್ಕೂ ಹೆಚ್ಚು ಗಣವೇಷಧಾರಿ ಸ್ವಯಂ ಸೇವಕರಿಂದ ಪಥ ಸಂಚಲನ ನಡೆಯಿತು. ಪುಷ್ಪ ವೃಷ್ಠಿಯೊಂದಿಗೆ ಭಗವಾ ಧ್ವಜ ಸ್ವಾಗತಿಸಲಾಯಿತು.

ಆರ್‌ಎಸ್‌ಎಸ್ ಪ್ರಮುಖ ಜಯೇಂದ್ರ ದೇಸಾಯಿ, ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅರವಿಂದರಾವ್ ದೇಶಪಾಂಡೆ, ಜಿಲ್ಲಾ ಕಾರ್ಯವಾಹ ಮಹಾಂತೇಶ ಗುಡ್ಡಾಪುರ, ತಾಲೂಕು ಸಂಚಾಲಕ ಅಶೋಕ ಕುಲಕರ್ಣಿ, ತಾಲೂಕು ಕಾರ್ಯವಾಹ ಮಹಾದೇವ ಐಗಳಿ, ಆನಂದ ಟೊನಪಿ, ಸಚಿನ್ ಕುಲಕರ್ಣಿ, ಸುನೀಲ ತಬೀಬ, ಮಕರಂದ ನಾಯಿಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net