

ತೀರ್ಥಹಳ್ಳಿ: ಭಾರತದ ಶ್ರೀಮಂತ ಸಂಸ್ಕೃತಿಯಿAದಾಗಿ ವಿಶ್ವವೇ ನಮ್ಮ ದೇಶವನ್ನು ಗುರು ಸ್ಥಾನದಲ್ಲಿ ಕಾಣುತ್ತಿದೆ. ಆದರೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುವ ನಾವು ಆ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿರುವುದು ವಿಷಾದನೀಯ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಷಿ ಹೇಳಿದರು.
ಪಟ್ಟಣದ ಗೋಪಾಲಗೌಡ ರಂಗಮAದಿರದಲ್ಲಿ ಭಾನುವಾರ ಸಂಜೆ ಭರತನಾಟ್ಯ ಕಲಾವಿದೆ ಅನಘಾ ಎ.ಆಚಾರ್ಯ ರಂಗಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಲ್ಯದಲ್ಲಿಯೇ ಮಕ್ಕಳ ಆಂತರಿಕ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಯಶಸ್ಸು ದೊರೆಯುವುದು ಖಚಿತ. ಇದಕ್ಕೆ ಅನಘಾ ಆಚಾರ್ಯ ಸಾಧನೆ ಅನುಕರಣೀಯವಾಗಿದೆ. ಮನೋತಜ್ಞೆಯಾಗಿ ಶೈಕ್ಷಣಿಕವಾಗಿಯೂ ಉತ್ತಮ ಸಾಧನೆ ಹೊಂದಿದ್ದು, ದೇಶದ ಸಾಂಸ್ಕೃತಿಕ ರಾಯಭಾರಿಯಾಗುವ ಎಲ್ಲ ಅರ್ಹತೆಯನ್ನೂ ಹೊಂದಿದ್ದಾಳೆ ಎಂದು ಭವಿಷ್ಯ ನುಡಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ನಮ್ಮ ನೆಲದ ಭರತನಾಟ್ಯ ಕಲೆಯಲ್ಲಿ ಇಂತಹ ಪ್ರತಿಭೆಗಳು ಪ್ರವರ್ಧಮಾನಕ್ಕೆ ಬರುತ್ತಿರುವುದು ಸಂತಸದ ಸಂಗತಿ. ಈ ಕಲೆಯನ್ನು ಮುಂದಿನ ತಲೆಮಾರಿಗೂ ತಲುಪಿಸಲು ಇಂತಹ ಪ್ರತಿಭೆಗಳನ್ನು ಉತ್ತೇಜಿಸಬೇಕು. ಜಗತ್ತಿಗೆ ಉತ್ತಮ ಸಂದೇಶವನ್ನು ಸಾರುವ ಈ ಪರಂಪರೆಯನ್ನು ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ಸುಮುಖ ನೃತ್ಯ ಶಾಲೆಯ ಶ್ರೀಲತಾ ಪ್ರೀತಂಗAಧರ್ವ, ಮುಖ್ಯಸ್ಥ ಶಂಕರನಾರಾಯಣ, ನೃತ್ಯಗುರುಗಳಾದ ಶ್ರೀಧರ್, ಪ್ರತಿಮಾ ಶ್ರೀಧರ್ ಇದ್ದರು.