ಜಗತ್ತಿನಲ್ಲೇ ಮೇರು ಸ್ಥಾನ ಪಡೆದ ಭಾರತೀಯ ಸಂಸ್ಕೃತಿ

27 LKR PH 2
Published on

ಲಕ್ಕೂರು: ಇಡೀ ಜಗತ್ತಿನಲ್ಲಿಯೇ ಸಂಸತಿ ಹಾಗೂ ಸಾಂಸತಿಕವಾಗಿ ಭಾರತ ಮೇರು ಸ್ಥಾನ ಪಡೆದಿದ್ದು, ಅದರಲ್ಲಿಯೂ ವಿಶೇಷವಾಗಿ ಕರ್ನಾಟಕವು ಸಂಸತಿಯಲ್ಲಿ ತನ್ನದೇ ಆದ ವೈಭವ ಹೊಂದಿದ ರಾಜ್ಯವಾಗಿದೆ ಎಂದು ಶಿಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಮಾಲೂರು ತಾಲೂಕು ಚಿಕ್ಕತಿರುಪತಿ ಗ್ರಾಮದ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿ ಶ್ರಾವಣ ಶನಿವಾರದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಚಿಕ್ಕತಿರುಪತಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಾಂಸತಿಕ ಸೌರಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಡೊಳ್ಳುಕುಣಿತ, ಭರತನಾಟ್ಯ, ಜಾನಪದ ಗೀತೆ, ಕೋಲಾಟ, ವೀರಗಾಸೆ ಮುಂತಾದ ಕಲೆಗಳು ನಮ್ಮ ಅಸ್ಮಿತೆಗಳಾಗಿವೆ. ಬೆಂಗಳೂರಿಗೆ ಹತ್ತಿರವಿರುವ ಗ್ರಾಮಾಂತರ ಭಾಗಗಳಲ್ಲಿ ಇಂತಹ ಕಲೆ, ಸಂಸತಿ ಉಳಿಸುವುದು ಬಹಳ ಕಷ್ಟ. ಮುಂದಿನ ತಲೆಮಾರಿಗೆ ಕಲೆಗಳನ್ನು ಉಳಿಸಿ&ಬೆಳಸುವ ಕೆಲಸ ನಮ್ಮದಾಗಬೇಕು, ಅದನ್ನು ಸಂಪ್ರದಾಯವಾಗಿ ಬೆಳೆಸಬೇಕು ಎಂದರು.

ಸಾಂಸತಿಕ ಕಾರ್ಯಕ್ರಮಕ್ಕೂ ಮುನ್ನ ದೇವಾಲಯದ ಆವರಣದ ರಾಜಗೋಪುರ, ಕಲ್ಯಾಣೋತ್ಸವ ಮಂಟಪ ಸೇರಿ ಇತರೆ ಕಾಮಗಾರಿಗಳನ್ನು ವಿಸಿದರು.

ಮಾಸ್ತಿ ಬ್ಲಾಕ್​ ಕಾಂಗ್ರೆಸ್​ ಅಧ್ಯ ಎಚ್​.ಎಂ. ವಿಜಯನರಸಿಂಹ, ಗ್ರಾಪಂ ಮಾಜಿ ಅಧ್ಯ ಟಿ.ಎಂ.ರಾಮ್​ ಪ್ರಸಾದ್​, ತಾಪಂ ಮಾಜಿ ಅಧ್ಯ ವಿ.ನಾಗೇಶ್​, ಊರಿನ ಮುಂಖಡರಾದ ಎ.ಕೆ.ವೆಂಕಟೇಶ್​, ಪೇಷ್ಕಾರ್​ ಚೆಲುವಸ್ವಾಮಿ, ವ್ಯವಸ್ಥಾಪಕ ಸಮಿತಿಯ ಸದಸ್ಯರಾದ ಕೃಷ್ಣಮೂರ್ತಿ, ಗೋಪಾಲ್​, ಶ್ರೀನಿವಾಸಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net