ಭರತನಾಟ್ಯದಿಂದ ದೇಶಿ ಸಂಸ್ಕೃತಿ ಶ್ರೀಮಂತ

mdal 21-1 sanman
ಮುಧೋಳದ ರನ್ನ ಸಂಸ್ಕೃತಿಕ ಭವನದಲ್ಲಿ ನೂಪುರ ನೃತ್ಯ ವಿದ್ಯಾಮಂದಿರ ಸಂಸ್ಥೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ನೃತ್ಯ ವೈಭವ ಹಾಗೂ ಪ್ರತಿಭಾ ಪುರಸ್ಕಾರ- 2025 ಕಾರ್ಯಕ್ರಮದಲ್ಲಿ ನೂಪುರ ನೃತ್ಯ ವಿದ್ಯಾ ಮಂದಿರದ ನಿರ್ದೇಶಕಿ ವಿದುಷಿ ಜಯೇಶ್ವರಿ ನಾಯಕ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತರಾದ ಉದಯ ಕುಲಕರ್ಣಿ, ಡಾ. ವೀಣಾ ಕಕರಡ್ಡಿ ಇದ್ದರು.
Published on

ಮುಧೋಳ: ಭರತ ನಾಟ್ಯದಿಂದ ದೇಶಿ ಸಂಸ್ಕೃತಿ ಶ್ರೀಮಂತಗೊಳ್ಳುತ್ತದೆ ಎಂದು ಪ್ರಭುಲಿಂಗೇಶ್ವರ ಶುಗರ್ಸ್‌ನ ನಿರ್ದೇಶಕಿ ಆಶಾ ಗುಡಗುಂಟಿ ಹೇಳಿದರು.

ನಗರದ ರನ್ನ ಭವನದಲ್ಲಿ ನೂಪುರ ನೃತ್ಯ ವಿದ್ಯಾಮಂದಿರ ಸಂಸ್ಥೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನೃತ್ಯ ವೈಭವ ಹಾಗೂ ಪ್ರತಿಭಾ ಪುರಸ್ಕಾರ-2025ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಭರತನಾಟ್ಯಕ್ಕೆ ಮನ್ನಣೆ ದೊರೆಯುತ್ತಿಲ್ಲ. ಭರತನಾಟ್ಯ ಕಲಿಕೆಯಿಂದ ಮಕ್ಕಳಲ್ಲಿ ಆರೋಗ್ಯ ವೃದ್ಧಿ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು.

ಕೆ.ಆರ್. ಲಕ್ಕಂ ಶಿಕ್ಷಣ ಸಂಸ್ಥೆ ನಿರ್ದೇಶಕಿ ಸುನಂದಾ ಲಕ್ಕಂ, ಸ್ಯಾಮುಯೆಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಮಾರ್ಗರೇಟ್ ಟೇಗೂರ, ಪತ್ರಕರ್ತ ಉದಯ ಕುಲಕರ್ಣಿ ಮಾತನಾಡಿದರು.

ನೂಪುರ ನೃತ್ಯ ವಿದ್ಯಾ ಮಂದಿರದ ನಿರ್ದೇಶಕಿ ವಿದುಷಿ ಜಯೇಶ್ವರಿ ನಾಯಕ ಅಧ್ಯಕ್ಷತೆ ವಹಿಸಿದ್ದರು.

ಪ್ರಗತಿ ಸಮುದಾಯ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಸವರಾಜ ಮಾನೆ, ಮಂಜುನಾಥ ರಾಯಕರ್, ಸ್ತ್ರೀ ರೋಗ ತಜ್ಞೆ ಡಾ. ವೀಣಾ ಕಕರಡ್ಡಿ, ಪತ್ರಕರ್ತರಾದ ವೆಂಕಟೇಶ ಗುಡೆಪ್ಪನವರ, ಗೋವಿಂದಪ್ಪ ತಳವಾರ, ಇನ್ನರ್‌ವೀಲ್ ಅಧ್ಯಕ್ಷೆ ಭಾರತಿ ಪೂಜಾರಿ ಇದ್ದರು.

ಸಾಧನೆಗೈದ ವಿದ್ಯಾರ್ಥಿಗಳಾದ ಶಿವಾನಿ ಕುಚನೂರ, ಗಾಯತ್ರಿ ಜೀರಗಾಳ, ರಂಜಿತಾ ಪಟ್ಟಣಶೆಟ್ಟಿ, ತನುಶ್ರೀ ಮುಳಗುಂದ, ಅಮೂಲ್ಯಾ ಕಾಂಬಳೆ, ಸಿಂಚನಾ ಗಡಾದ, ದಿಶಾ ದೇಶಪಾಂಡೆ, ಅನುಷಾ ಸಾವಕಾರ, ಪೂರ್ವಿ ಹೆಬಸೂರ, ಭುವನಾ ಪರೀಟ್, ಗೌರಿ ಪಾಟೀಲ, ನವ್ಯಾ ಬಸವನಾಳ, ಸಮೃದ್ಧಿ ತುಬಾಕಿ, ಮೇಘಾ ಪತ್ತಾರ, ಅಭಯಶ್ರೀ ಕಂಬಾರ ಅವರನ್ನು ಸತ್ಕರಿಸಲಾಯಿತು.

ಭರತನಾಟ್ಯ ಭಾರತೀಯ ಸಾಂಸ್ಕೃತಿಕ ಲೋಕದ ಅಸ್ಮಿತೆೆ. ಅದು ಕೇವಲ ಮನೋರಂಜನೆ ಕಲೆಯಲ್ಲ. ಪಾರಂಪರಿಕ ಕಲೆಯಾಗಿದ್ದು ಇದು ನಮ್ಮ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಇದನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಸಮಾಜದ ಸಹಕಾರ ಅಗತ್ಯ.

ವಿದುಷಿ ಜಯೇಶ್ವರಿ ನಾಯಕ, ನೂಪುರ ನೃತ್ಯ ಸಂಸ್ಥೆ ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net