

ಹೊನ್ನಾವರ: ಭಾರತೀಯ ಸಂಸ್ಕೃತಿಯು ಸಂಸ್ಕೃತದಲ್ಲಿದೆ. ಸಂಸ್ಕೃತವನ್ನು ಅಭ್ಯಸಿಸಿದರೆ ಸಂಸ್ಕೃತಿಯ ಅರಿವಾಗುವುದು. ಆದ್ದರಿಂದ ಸಂಸ್ಕೃತವನ್ನು ಅಧ್ಯಯನ ಮಾಡೋಣ ಎಂದು ಕರ್ನಾಟಕ ಸಂಸೃ್ಕ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ನಾರಾಯಣ ಯಾಜಿ ಸಾಲೇಬೈಲು ಹೇಳಿದರು.
ತಾಲೂಕಿನ ಮುಗ್ವಾದ ಶ್ರೀ ರಾಘವೇಂದ್ರ ಭಾರತೀ ಸವೇದ ಸಂಸೃ್ಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಸಂಸ್ಕೃತೋತ್ಸವ ಹಾಗೂ ಅಭಿನಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಯತ್ನಿಸಿದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಜ್ಞಾನವಂತರಾಗಬಹುದು. ನಚಿಕೇತನ ಮನಸ್ಥಿತಿ ನಮ್ಮದಾಗಬೇಕು. ಪ್ರತಿಯೊಬ್ಬರೂ ಉನ್ನತವಾದ ಚಿಂತನೆಯುಳ್ಳವರಾಗಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ವೇ.ಮೂ. ಸುಬ್ರಹ್ಮಣ್ಯ ಭಟ್ಟ ಸಂಧ್ಯಾವಂದನೆಯ ಪುಸ್ತಕವನ್ನು ಪ್ರದಾನ ಮಾಡಿ ವಿದ್ಯಾಲಯದಲ್ಲಿ ಸಂಧ್ಯಾ ಪಾಠ ಚೆನ್ನಾಗಿ ಮುಂದುವರಿಯಲಿ. ಮಕ್ಕಳು ನಿತ್ಯವೂ ಸಂಧ್ಯೆಯನ್ನು ಅನುಷ್ಠಾನ ಮಾಡುವಂತವರಾಗಲಿ ಎಂದರು.
ಕರ್ನಾಟಕ ಸಂಸೃ್ಕ ವಿಶ್ವವಿದ್ಯಾಲಯದ ಸಹ ಕುಲಸಚಿವ ಡಾ. ವೆಂಕಟೇಶ್ ಮಾತನಾಡಿ ಇಂದಿನ ಸಂಸೃ್ಕ ಶಿಕ್ಷಣ ವಿಶ್ವವಿದ್ಯಾಲಯದ ಪಾತ್ರದ ಕುರಿತು ವಿವರಿಸಿದರು. ಪ್ರಾಚಾರ್ಯ ಡಾ. ನಾಗಪತಿ ಭಟ್ಟ ಸ್ವಾಗತಿಸಿದರು. ಡಾ. ಶ್ರೀದೇವಿ ಹೆಗಡೆ ನಿರ್ವಹಿಸಿದರು.