ವಿಶ್ವಕ್ಕೇ ಮಾದರಿಯಾಗಿದೆ ಭಾರತೀಯ ಸಂಸ್ಕೃತಿ

Indian culture is a model for the world.
ಬನಹಟ್ಟಿಯ ಮಹಾವೀರ ಸ್ವೀಟ್‌ಮಾರ್ಟ್ ಆವರಣದಲ್ಲಿ ಆಯೋಜಿಸಿದ್ದ ಸನ್ಮಾನ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಮಹಿಳಾ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಮಹಾಂತ ಪ್ರಭೂಜಿ, ಗುರುಸಿದ್ಧೇಶ್ವರ ಶ್ರೀಗಳು, ಶರಣಬಸವ ಶಿವಾಚಾರ್ಯರು, ಪ್ರಕಾಶ ದೇಸಾಯಿ, ದೇವಲ ದೇಸಾಯಿ, ಶಂಕರ ಸಂಕನ್ನವರ, ಮಹಾವೀರ ಭಿಲವಡಿ, ಅಮೃತಾ ದೇಸಾಯಿ ಮತ್ತಿತರರಿದ್ದಾರೆ.
Published on

ರಬಕವಿ-ಬನಹಟ್ಟಿ: ಭಾರತೀಯ ಸಂಸ್ಕೃತಿ ಪುರಾತನವಾಗಿದ್ದೂ ವಿಶ್ವಕ್ಕೇ ಮಾದರಿಯಾಗಿದೆ ಎಂದು ಶೇಗುಣಸಿಯ ಮಹಾಂತ ಪ್ರಭೂಜಿ ಹೇಳಿದರು.

ಪಟ್ಟಣದ ಮಹಾವೀರ ಸ್ವೀಟ್‌ಮಾರ್ಟ್ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆದರ್ಶ ಮಾರ್ಗ ಅನುಸರಿಸಿ ನಡೆದರೆ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತದೆ. ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕು ಎಂದರು.

ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಬದ್ಧತೆ ಬೆಳೆಸಿಕೊಂಡರೆ ಮುಂದಿನ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯವಿದೆ. ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತಿ ರೂಢಿಸಿಕೊಳ್ಳಬೇಕು. ಮಹಿಳಾ ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸಿದ್ದು ಶ್ಲಾಘನೀಯ ಎಂದರು.

ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ಮಾತನಾಡಿ, ಮಹಾವೀರ ಸ್ವೀಟ್ ಕಾರ್ಖಾನೆಯ ಪ್ರಕಾಶ ದೇಸಾಯಿ ಅವರು ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಮೂಲಕ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ ಎಂದರು.

ಪ್ರಕಾಶ ದೇಸಾಯಿ, ದೇವಲ ದೇಸಾಯಿ, ಶಂಕರ ಸಂಕನ್ನವರ, ಮಹಾವೀರ ಭಿಲವಡಿ, ಅಮೃತಾ ದೇಸಾಯಿ, ಸಂಗಮೇಶ ಗುಟ್ಲಿ, ಚಂದ್ರಕಾಂತ ಕಾಸಾರ, ಮಹಾವೀರ ಕೊತ್ತಲಗಿ, ಶ್ರೀಮಂತ ಕಾನಗೊಂಡ, ಶ್ರೀಶೈಲ ಕೊಳಕಿ, ವೆಂಕಟೇಶ ನಾಯಕವಾಡಿ, ಮಲ್ಲು ಹಿತ್ತಲಗಿ, ಭರತೇಶ ಯಲ್ಲಟ್ಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net