

ನರಗುಂದ: ಭಾರತೀಯರ ಸಂಸ್ಕೃತಿ, ಸಂಸ್ಕಾರ, ವಿನಯಶೀಲತೆ ಮತ್ತು ಪರಂಪರೆ ಗುಣಮಟ್ಟದ ಶಿಕ್ಷಣದ ಮೂಲ ಆಧಾರ ಸ್ತಂಭಗಳಾಗಿವೆ. ಇವುಗಳನ್ನು ಉಳಿಸಿ-ಬೆಳೆಸಿಕೊಂಡು ಹೋಗುತ್ತಿರುವ ಬಸವೇಶ್ವರ ವಿದ್ಯಾಲಯದ ಕಾರ್ಯ ಅವಿಸ್ಮರಣೀಯ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ ಹೇಳಿದರು.
ಪಟ್ಟಣದ ಬಸವೇಶ್ವರ ವಿದ್ಯಾಲಯದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 15ನೇ ವರ್ಷದ ಸ್ಪೂರ್ತಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಇಒ ಡಾ. ಗುರುನಾಥ ಹೂಗಾರ ಮಾತನಾಡಿ, ಭಾರತದ ಹಣೆಬರಹ ತರಗತಿಯ ಕೊಠಡಿಗಳಲ್ಲಿ ರೂಪುಗೊಳ್ಳುತ್ತದೆ. ಪುಸ್ತಕದ ವಿಷಯವನ್ನು ವಿದ್ಯಾರ್ಥಿಗಳು ಮಸ್ತಕದಲ್ಲಿ ಅಳವಡಿಸಿಕೊಂಡು ಸುಂದರ ಬದುಕು ರೂಪಿಸಿಕೊಳ್ಳಬೇಕು ಎಂದರು.
ಬಸವೇಶ್ವರ ವಿದ್ಯಾಲಯದ ಚೇರ್ಮನ್ ಚನ್ನಬಸಪ್ಪ ಕಂಠಿ ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ಆಫ್ರೀನ ಪಟೇಲ್, ಆಡಳಿತಾಧಿಕಾರಿ ಕಾವೇರಿ ಪಾಟೀಲ ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶಿವಕುಮಾರ ಕಂಠಿ, ಜಿ.ಎನ್. ದೊಡ್ಡಲಿಂಗಪ್ಪನವರ, ಬಿ.ಆರ್.ರಾಯನಗೌಡ್ರ, ಬಿ.ಎಂ.ಬಡಿಗೇರ, ಆರ್.ಎಚ್.ನದಾಫ್ ಇದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.