ಮದ್ದೂರು: ಭಾರತದ ಸಂಸ್ಕೃತಿಗೆ ಸನಾತನ ಇತಿಹಾಸವಿದ್ದು, ವಿಶ್ವವೇ ನಮ್ಮ ಸಂಸ್ಕೃತಿಯನ್ನು ಮೆಚ್ಚಿಕೊಂಡಿದೆ ಎಂದು ಮಂಡ್ಯ ವಿಶ್ವ ವಿದ್ಯಾಲಯದ ವಿಶೇಷಾಧಿಕಾರಿ ಡಾ.ನಿಂಗೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ಬುಧವಾರ ನಿಹೋನ್ ಪುಕುಷಿ ವಿಶ್ವವಿದ್ಯಾಲಯ, ಐಚಿ ಪ್ರೆಪಕ್ಚರ್ ಜಪಾನ್ ಮತ್ತು ಇಂಡೋ ಜಪಾನ್ ಅಕಾಡೆಮಿ, ಕಲ್ಚರಲ್ ಎಕ್ಸ್‌ಚೆಂಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವದಲ್ಲಿ ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಏಕೈಕ ದೇಶವಾಗಿದ್ದು, ಪ್ರತಿಯೊಬ್ಬರು ಬೇರೆ ಬೇರೆ ದೇಶಗಳ ಸಂಸ್ಕೃತಿ ತಿಳಿದುಕೊಳ್ಳುವ ಹಾಗೂ ಭಾಷೆಯನ್ನು ಕಲಿಯುವುದು ತಪ್ಪಲ್ಲ. ಈ ಹಿನ್ನೆಲೆಯಲ್ಲಿ ಇಂಡೋ ಜಪಾನ್ ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿಯನ್ನು ವಿನಿಮಯ ಮಾಡಿಕೊಳ್ಳಲು ಮುಂದಾಗಿರುವುದು ಹಾಗೂ ಇದಕ್ಕೆ ಎಚ್.ಕೆ.ವೀರಣ್ಣಗೌಡ ಕಾಲೇಜಿನ ಆಡಳಿತ ಮಂಡಳಿ ಅವಕಾಶ ಮಾಡಿಕೊಟ್ಟಿರುವುದು ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಪಾನ್ ವಿದ್ಯಾರ್ಥಿಗಳು ಕೊಳಗಕ್ಕೆ ರಾಗಿಯನ್ನು ಸುರಿಯುವ ಮೂಲಕ ನಮ್ಮ ಸಂಸ್ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿವಿ ಕಾರ್ಯದರ್ಶಿ ಸಿ.ಅಪೂರ್ವಚಂದ್ರು ಮಾತನಾಡಿದರು. ಪ್ರೊ.ಸುನಿತಾ, ಡಾ.ಎಂ.ಇಂದ್ರ, ನಿಹೋನ್ ಪುಕುಸಿ, ವಿವಿ ಸೈಟೋ, ಅಜಿರೋ ಥೂನೋಡ, ಏಮಿಕೋ ಕಿಮುರಾ, ಮಜಿಕೋ ಸೆಕೋಡೋ ನೈರೋ ಹೋಗಾ, ಇಂಟರ್ ನ್ಯಾಷನಲ್ ಚಿಲ್ಡ್ರನ್ ವಿಲೇಜ್ ಹ್ಯಾಪಿ ವ್ಯಾಲಿಯ ಕೃಷ್ಣಕುಮಾರ್ ಮಣಿಕಾಂತ್, ಪ್ರಾಂಶುಪಾಲ ಬಿ.ವಿ.ಎಸ್.ಶೇಂಡಿಗೆ, ಉಪನ್ಯಾಸಕರಾದ ಪ್ರೊ.ಪ್ರಕಾಶ್, ಶ್ರೀಲತಾ, ಶಿವಕುಮಾರ್ ಇದ್ದರು.