ಭಾರತೀಯ ಸಂಸ್ಕೃತಿ ಉತ್ಸವ 28ರಂದು

19LNG03
ಬಸವರಾಜ ಪಾಟೀಲ್ ಸೇಡಂ
Published on

ಲಿಂಗಸುಗೂರು: ಕಲಬುರಗಿ-ಸೇಡಂ ರಾಜ್ಯ ಹೆದ್ದಾರಿ ಬೀರನಹಳ್ಳಿ ಕ್ರಾಸ್‌ನಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಭಾರತ ವಿಕಾಸ ಸಂಗಮ, ವಿಕಾಸ ಅಕಾಡೆಮಿಯಿಂದ ಜ.28ರಿಂದ ಫೆ.6ರವರೆಗೆ ಭಾರತೀಯ ಸಂಸ್ಕೃತಿ ಉತ್ಸವ-7 ಮತ್ತು ಕೊತ್ತಲ ಸ್ವರ್ಣ ಜಯಂತಿ ಸಮಾವೇಶ ನಡೆಯಲಿದೆ ಎಂದು ಭಾರತ ವಿಕಾಸ ಸಂಗಮ ಸಂರಕ್ಷಕ ಬಸವರಾಜ ಪಾಟೀಲ್ ಸೇಡಂ ಹೇಳಿದರು.

ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರಮುಖರ ಸಭೆಯಲ್ಲಿ ಮಾತನಾಡಿದರು. ಜ.28ರಂದು ಕಲಬುರಗಿ ಮತ್ತು ಸೇಡಂನಲ್ಲಿ ಬೆಳಗ್ಗೆ ಶೋಭಾಯಾತ್ರೆ, ಮಧ್ಯಾಹ್ನ ಆಹ್ವಾನಿತ ಅತಿಥಿ ಗಣ್ಯರಿಂದ ಪ್ರದರ್ಶನ ಮತ್ತು ಲೋಕಗಳ ಉದ್ಘಾಟನೆ.

ಜ.29ರಂದು ಮಾತೃ ಸಮಾವೇಶ, ಜ.30ರಂದು ಶೈಕ್ಷಣಿಕ ಸಮಾವೇಶ, ಜ.31ರಂದು ಯುವ ಸಮಾವೇಶ, ಫೆ.1ರಂದು ಗ್ರಾಮ ಕೃಷಿ ಸಮಾವೇಶ, ಫೆ.2ರಂದು ಆಹಾರ-ಆರೋಗ್ಯ ಸಮಾವೇಶ, ಸಾಮೂಹಿಕ ಯೋಗ ಪ್ರದರ್ಶನ, ಫೆ.3ರಂದು ಸ್ವಯಂ ಉದ್ಯೋಗ ಸಮಾವೇಶ,

ಫೆ.4ರಂದು ನಾವು ಮತ್ತು ನಮ್ಮ ಪ್ರಕೃತಿ ಕುರಿತ ಸಮಾವೇಶ, ಫೆ.5ರಂದು ಸೇವಾ ಶಕ್ತಿ ಸಮಾವೇಶ, ಫೆ.6ರಂದು ದೇಶ-ಧರ್ಮ-ಸಂಸ್ಕೃತಿ ಸಮಾವೇಶ, ಭಾರತೀಯ ಸಾಂಸ್ಕೃತಿಕ ಉತ್ಸವ-7 ಸಮಾರೋಪ ಸಮಾರಂಭ, ಫೆ.7ರಂದು ಅಭಿನಂದನ ಸಮಾರಂಭ ಹಾಗೂ ಶ್ರೀ ಕೆ.ಎನ್.ಗೋವಿಂದಾಚಾರ್ಯ ಸಹಸ್ರ ಚಂದ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಸಮಾವೇಶದಲ್ಲಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರಮುಖರಾದ ಸಿ.ಶರಣಪ್ಪ, ಶಿವಾನಂದ ಐದನಾಳ, ಶರಣಬಸವ ಮೇಟಿ, ನಾಗರಾಜ ಗಸ್ತಿ, ಗವಿಸಿದ್ದಪ್ಪ ಸಾಹುಕಾರ, ಮಹಾಂತೇಶ ಸುಂಕದ, ಕುಪ್ಪಣ್ಣ ಮಾಣಿಕ್, ಉಮೇಶ ಸರ್ಜಾಪುರ, ಅನಂತದಾಸ, ರಾಜಶೇಖರ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net