ಕಾಫಿ ಮಂಡಳಿಯಲ್ಲಿ ಕೊಡಗಿಗೆ ಅನ್ಯಾಯ

581252_283897518367290_100002411331830_585112_1484423508_n
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಭಾರತೀಯ ಒಟ್ಟು ಕಾಫಿ ಉತ್ಪಾದನೆಯಲ್ಲಿ ಶೇ.೬೦ ರಷ್ಟು ಕಾಫಿ ಕೊಡಗು ಜಿಲ್ಲೆಯಲ್ಲಿ ಉತ್ಪಾದಿಸಲಾಗುತ್ತಿದೆ. ಹೀಗಿದ್ದರೂ, ಭಾರತೀಯ ಕಾಫಿ ಮಂಡಳಿ ಸದಸ್ಯರ ನೇಮಕಾತಿಗೆ ಕೊಡಗಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ಬಾರಿ ಕೊಡಗಿನ ಒಬ್ಬರಿಗೆ ಮಾತ್ರ ಮಂಡಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಮಡಿಕೇರಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾಗಿರುವ ಬಿಜೆಪಿ ಹಿರಿಯ ಮುಖಂಡ ತಳೂರು ಕಿಶೋರ್‌ಕುಮಾರ್ ಪ್ರಸ್ತುತ ಮಂಡಳಿ ಗೆ ನೇಮಕಗೊಂಡಿರುವ ಕೊಡಗಿನ ಏಕೈಕ ಸದಸ್ಯ. ಮಂಡಳಿಗೆ ಇಬ್ಬರು ಸಂಸದರು ಹಾಗೂ ಒಬ್ಬ ರಾಜ್ಯಸಭೆ ಸದಸ್ಯರನ್ನು ನೇಮಕ ಮಾಡ ಲಾಗಿದೆ. ಈ ಪೈಕಿ ಮೈಸೂರು- ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವಕಾಶ ಪಡೆದಿದ್ದಾರೆ.’

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ವ್ಯಾಪ್ತಿಯಲ್ಲಿರುವ ಭಾರತೀಯ ಕಾಫಿ ಮಂಡಳಿಯ ೩೧ ಸದಸ್ಯ ಸ್ಥಾನಕ್ಕೆ ಸೆ.೯ ರಂದು ನೇಮಕಾತಿ ಆದೇಶ ಹೊರಡಿಸಲಾಗಿದೆ. ಪದನಿಮಿತವಾಗಿ ವಿವಿಧ ಇಲಾಖಾಧಿಕಾರಿಗಳು ಮಂಡಳಿ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸಲಿ ದ್ದಾರೆ.

ಕರ್ನಾಟಕ ರಾಜ್ಯದ ಒಟ್ಟು ಉತ್ಪಾದನೆಯಲ್ಲಿ ಶೇ.೭೦ ರಷ್ಟು ಕಾಫಿ ಉತ್ಪಾದನೆ ಕೊಡಗಿನಲ್ಲಿ ಆಗುತ್ತದೆ. ಹೀಗಿದ್ದರೂ, ಮಂಡಳಿಯಲ್ಲಿ ಚಿಕ್ಕಮಗಳೂರು ಅಗ್ರಸ್ಥಾನ ಪಡೆದುಕೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಿಂದ ಐವರು, ಹಾಸನ ಜಿಲ್ಲೆಯಿಂದ ಇಬ್ಬರು ನೇಮಕಗೊಂಡಿ ದ್ದಾರೆ. ಕೊಡಗಿನ ಸಾಕಷ್ಟು ಜನ ಮಂಡಳಿ ಸದಸ್ಯತ್ವಕ್ಕೆ ಪ್ರಯತ್ನ ನಡೆಸಿದ್ದರೂ, ಸದಸ್ಯತ್ವಕ್ಕೆ ನೇಮಕಗೊಂಡಿಲ್ಲ.

ದೊಡ್ಡ ಬೆಳೆಗಾರರ ಪರವಾಗಿ ತಮಿಳುನಾಡಿನ ಶೇಖರ್ ನಾಗರಾಜನ್, ಆರ್.ಪಿ.ಎಂ. ರವಿಚಂದ್ರನ್, ಚಿಕ್ಕಮಗಳೂರು ಜಿಲ್ಲೆಯ ಎಚ್. ಎಸ್. ಕೃಷ್ಣಾನಂದ ನೇಮಕಗೊಂಡಿದ್ದಾರೆ. ಸಣ್ಣ ಬೆಳೆಗಾರರ ಪರವಾಗಿ ಕೊಡಗಿನ ತಳೂರು ಕಿಶೋರ್‌ಕುಮಾರ್, ಹಾಸನದ ಜಿ.ಕೆ. ಕುಮಾರ್, ಎನ್.ಬಿ. ಉದಯಕುಮಾರ್, ತಮಿಳುನಾಡಿನ ಎಸ್.ಮುನಿಗೌಡನ್, ಕೇರಳದ ಇ. ಉಣ್ಣಿಕೃಷ್ಣನ್, ಆಂಧ್ರಪ್ರದೇಶದ ವಿಶ್ವನಾಥಮ್, ಉಮಾ ಮಹೇಶ್ವರ ರಾವ್ ನೇಮಕವಾಗಿದ್ದಾರೆ.

ವರ್ತಕರ ಪ್ರತಿನಿಧಿಗಳಾಗಿ ಚಿಕ್ಕಮಗಳೂರಿನ ಪ್ರದೀಪ್ ಪೈ, ತಮಿಳುನಾಡಿನ ಕೆ.ಕೆ. ಮನೋಜ್‌ಕುಮಾರ್, ಪ್ರಭಾಕರ್ ರಾವ್ ನೇಮಕಗೊಂಡಿದ್ದಾರೆ. ಕ್ಯೂರಿಂಗ್ ವರ್ಕ್ಸ್ ಪ್ರತಿನಿಧಿಗಳಾಗಿ ಚಿಕ್ಕಮಗಳೂರಿನ ಡಿ.ಎಂ. ಶಂಕರ್, ಎ.ಜಿ. ದಿವಿನ್ ರಾಜ್ ನೇಮಕವಾಗಿದ್ದಾರೆ. ಕಾರ್ಮಿಕ ಮುಖಂಡರ ಪರವಾಗಿ ಚಿಕ್ಕಮಗಳೂರಿನ ಎನ್. ಭಾಸ್ಕರ್, ಕೇರಳದ ಸಿಬಿ ವರ್ಗೀಸ್ ನೇಮಕಗೊಂಡಿದ್ದಾರೆ.

ಇನ್ಸ್ಟೆಂಟ್ ಕಾಫಿ ಪರವಾಗಿ ಹೈದಾರಬಾದ್‌ನ ಚಾಲ್ಸ್ ಶ್ರೀಕಾಂತ್, ಗ್ರಾಹಕರ ಪರವಾಗಿ ಮಧ್ಯಪ್ರದೇಶದ ಮನೋಜ್‌ಕುಮಾರ್, ಮುಂಬಯಿಯ ಶ್ರೀದಿಶ್ ವಾಸುದೇವ್ ದೇಶಪಾಂಡೆ, ಸಂಶೋಧನಾ ಕೇಂದ್ರದ ಪರವಾಗಿ ಜಿ.ಎಸ್. ಮಹಾಬಲ ನೇಮಕಗೊಂಡಿದ್ದಾರೆ.

**
ಸಣ್ಣ ಬೆಳೆಗಾರರ ಪರವಾಗಿ ಭಾರತೀಯ ಕಾಫಿ ಮಂಡಳಿ ಸದಸ್ಯರನ್ನಾಗಿ ನನ್ನನ್ನು ನೇಮಕ ಮಾಡಲಾಗಿದೆ. ಕೊಡಗಿನ ಕಾಫಿ ಬೆಳೆಗಾರರು, ಕಾರ್ಮಿಕರು ಸೇರಿದ್ದಂತೆ ಕಾಫಿ ಉದ್ದಿಮೆ ಎದುರಿಸುತ್ತಿರುವ ಸಂಕಷ್ಟದ ಕುರಿತು ಮಂಡಳಿ ಸಭೆಯಲ್ಲಿ ಗಮನ ಸೆಳೆಯಲಾಗುವುದು. ತಳೂರು ಕಿಶೋರ್‌ಕುಮಾರ್, ಸದಸ್ಯರು, ಭಾರತೀಯ ಕಾಫಿ ಮಂಡಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net