

ಕಾರವಾರ: `ಈ ದೇಶದ ಕಾನೂನೇ ಸರಿ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ವಹಿಸಲು ಸಾಧ್ಯವಾಗುತ್ತಿಲ್ಲ' ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಽಗಳ ಜತೆ ಮಾತನಾಡಿದ ಅವರು, ಜಾಲತಾಣಗಳ ನಿಯಂತ್ರಣಕ್ಕೆ ದೇಶದಲ್ಲಿ ಒಂದು ಕಾನೂನು ತರಲಾಗಿತ್ತು. ಆದರೆ, ಅದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿದೆ.
ಹಾಗಾಗಿ ಪೊಲೀಸರೂ ಅಸಹಾಯಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸಿದ ಬಗ್ಗೆ ನಾನೇ ಕೊಟ್ಟ ಐದು ದೂರುಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ.
ಮನಸ್ಥಿತಿ ಸರಿ ಇಲ್ಲದವರು ಸುಳ್ಳು ಸುದ್ದಿಗಳ ಮೂಲಕ ಸಮಾಜ ಹಾಳು ಮಾಡಿದ್ದಾರೆ. ಕಳ್ಳರಂತೆ ಫೇಕ್ ಅಕೌಂಟ್ ಮಾಡಿಕೊಂಡು ಇಲ್ಲದ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ನಾವು ಕಡಿವಾಣ ಹಾಕುತ್ತೇವೆ ಎಂದರು.
ಮಾನಸಿಕ ಸ್ತಿಮಿತ ಸರಿ ಇಲ್ಲ:
ಬಿಜೆಪಿಯವರಿಗೆ ರಾಜಕಾರಣ ಮಾಡಲು ಬರುವುದಿಲ್ಲ. ಬಿಜೆಪಿ ಕೈಗೆ ಈ ರಾಜ್ಯವನ್ನು ಐದು ವರ್ಷ, ದೇಶವನ್ನು 10 ವರ್ಷ ಕೊಡಲಾಯಿತು. ಆಗಬಾರದ್ದು ಆಗಿದೆ. ಯಾವುದೇ ಅಭಿವೃದ್ಧಿಯಾಗಿಲ್ಲ. ನಾವು ಏನೇ ಸರಿ ಮಾಡಿದರೂ ಬಿಜೆಪಿಯವರು ಸುಳ್ಳು ಹೇಳಿಯೇ ರಾಜಕಾರಣ ಮಾಡುತ್ತಾರೆ.
ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಮೇಲೆ ಬಿಜೆಪಿ ನಾಯಕರೆಲ್ಲರೂ ಒಟ್ಟಾಗೇ ಇಲ್ಲ. ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ. ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ.
ಅವರ ಮನಸ್ಥಿತಿ ಸರಿ ಇಲ್ಲ. ಅದನ್ನು ಸರಿ ಮಾಡಿಕೊಳ್ಳಲು ದೇವಸ್ಥಾನಕ್ಕೆ ಹೋಗಲಿ, ದೇವರೇ ಅವರಿಗೆ ಬುದ್ಧಿ ಕೊಡಬೇಕು ಎಂದರು.
ಬಿಜೆಪಿಯಲ್ಲೇ ಶಿಸ್ತಿಲ್ಲ.
ಹಾಗೇನಾದರೂ ಇದ್ದರೆ 14 ಜನರನ್ನು ಕಾಂಗ್ರೆಸ್‌ನಿAದ ಪಡೆಯುತ್ತಿರಲಿಲ್ಲ. ಕಾಂಗ್ರೆಸ್‌ನಿAದ ಹೋದವರು ಆ ಪಕ್ಷದಲ್ಲಿ ಶಿಸ್ತು ಮೂಡಿಸಲು ಪ್ರಯತ್ನಿಸಿದರು. ಅದೂ ಸಾಧ್ಯವಾಗಿಲ್ಲ. ವಾಪಸ್ ಬರುತ್ತಿದ್ದಾರೆ ಎಂದರು.