ಇಂಡಿಯನ್ ಕೇಕ್ ಹೌಸ್‌ನಲ್ಲಿ ಹೊಸ ವರ್ಷಾಚರಣೆಗೆ ರಿಯಾಯಿತಿ ದರದಲ್ಲಿ ಕೇಕ್ ಮಾರಾಟ

30
Published on

ವೈವಿಧ್ಯಮಯ ಕೇಕ್‌ಗೆ ಹೆಸರುವಾಸಿಯಾಗಿರುವ ನಜರ್‌ಬಾದ್‌ದ ‘ಇಂಡಿಯನ್ ಕೇಕ್ ಹೌಸ್’ನಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಿಯಾಯಿತಿ ದರದಲ್ಲಿ ಕೇಕ್ ಮಾರಾಟ ಮಾಡಲಾಗುತ್ತಿದೆ.\

ವೆನಿಲಾ, ಪೈನಾಪಲ್, ಸ್ಟ್ರಾಬೆರಿ ಫ್ಲೇವರ್ ಒಂದು ಕೆ.ಜಿ. ಕೇಕ್‌ಅನ್ನು 499 ರೂ. ಗೆ ಮಾರಾಟ ಮಾಡಲು ಮುಂದಾಗಿದೆ. ಡಿ.28ರಿಂದ ಜ.1ರ ವರೆಗೆ ಈ ರಿಯಾಯಿತಿ ಇರಲಿದೆ. ಡಿ.28ರಿಂದ ಅಡ್ವಾನ್ಸ್ ಬುಕ್ಕಿಂಗ್ ಮಾಡಬಹುದಾಗಿದೆ ಎಂದು ಮಾಲೀಕ ಭರತ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ತುಪ್ಪ ಹಾಕಿ ಫ್ಲಮ್ ಕೇಕ್ ಮಾಡಲಾಗಿದೆ. ಡಿ.25ರವೆರೆಗೆ ಒಂದು ಕೆ.ಜಿ. ಫ್ಲಮ್ ಕೇಕ್‌ಅನ್ನು 600 ರೂ.ಗೆ ಮಾರಾಟ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ನೂತನ ವಾಹನ ಖರೀದಿ, ವಾರ್ಷಿಕೋತ್ಸವ ಸೇರಿದಂತೆ ಎಲ್ಲ ವಿಶೇಷ ದಿನಗಳಿಗೆ ಗ್ರಾಹಕರ ಇಚ್ಛೆಯ, ಸಂದರ್ಭಕ್ಕೆ ಅನ್ವಯವಾಗುವಂತಹ ಕೇಕ್‌ಗಳು ನಿಮ್ಮ ಕಣ್ಣು ಮುಂದೆಯೇ ಸಿದ್ಧಪಡಿಸಿ ನೀಡಲಾಗುತ್ತದೆ.

ವಿಂಟೇಜ್ ಕಾರ್, ದುಬೈ ಬುರ್ಜ ಕಲೀಫಾ, ಸ್ಪೈಡರ್ ಮ್ಯಾನ್, ಬುಕ್ ಆಕಾರದ ಕೇಕ್, ಆ್ಯಂಗ್ರಿ ಬರ್ಡ್, ವಿವಿಧ ವೆಡ್ಡಿಂಗ್ ಕೇಕ್ ಗಳು, ಕಿಡ್ಸ್ ಕೇಕ್, ಬಾಬಿ ಗರ್ಲ್, ಕನ್ಪೆಷನರಿ ಕೇಕ್‌ಗಳು, ಫ್ರೆಂಚ್ ಡ್ಯಾನಿಸ್, ಸ್ಟ್ರಾಬೆರಿ ಮೆಸ್ ಸೇರಿದಂತೆ ವಿಭಿನ್ನ ಬಗೆಯ ಕೇಕ್ ಲಭ್ಯವಿವೆ.

ಕೇಕ್ ಅಡ್ವಾನ್ಸ್ ಬುಕ್ಕಿಂಗ್‌ಗೆ ಮೊಬೈಲ್ ಸಂಖ್ಯೆ 9448033369, 9449130252 ಸಂಪರ್ಕಿಸುವಂತೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net