ಭಾರತೀಯ ಕಲೆ, ಸಂಸ್ಕೃತಿ ವಿಶ್ವಕ್ಕೆ ಮಾದರಿ

16 vikram 1
????????????????????????????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾರತೀಯ ಕಲೆ, ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಪಾಶ್ಚಾತ್ಯರೂ ನಮ್ಮ ಸಂಸ್ಕೃತಿ ಅಳವಡಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಡಾ.ಶಿವರಾಜ ದೇಶಮುಖ ಅಭಿಪ್ರಾಯಪಟ್ಟರು.

ನಗರದ ಆಲೂರು ವೆಂಕಟರಾವ್​ ಭವನದಲ್ಲಿ ಚಿಲಿಪಿಲಿ ಸಂಗೀತ ಸಾಂಸ್ಕೃತಿಕ ಕಲಾ ಅಕಾಡೆಮಿಯು ಪಂ.ರವಿ ಕೂಡ್ಲಿಗಿ ಪುಣ್ಯಸ್ಮರಣೆ ನಿಮಿತ್ತ ಭಾನುವಾರ ಏರ್ಪಡಿಸಿದ್ದ ತಬಲಾ ಮಾಂತ್ರಿಕ ಪಂ.ರವಿ ಕೂಡ್ಲಿಗಿ ಪ್ರಶಸ್ತಿ ಹಾಗೂ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಂಕರ ಹಲಗತ್ತಿ ಮಾತನಾಡಿ, ಧಾರವಾಡದಲ್ಲಿ ಇರುವಷ್ಟು ಸಾಹಿತ್ಯ ಸಂಗೀತ, ಕಲೆಯ ವಾತಾವರಣ ಮತ್ತೊಂದು ನಗರದಲ್ಲಿಲ್ಲ. ಸಾಧಕರ ನಾಡಿನಲ್ಲಿಂದು ಪರಂಪರೆಯ ಬಹುದೊಡ್ಡ ಕುಡಿಗಳು ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ. ಸಂಗೀತ ಪರಂಪರೆಯಲ್ಲಿರುವ ವಿನಯ ಶೀಲಗುಣ ಬಹುಶ್ರೇಷ್ಠ ಗುಣವಾಗಿದೆ. ಇಂತಹ ಸಾಧಕರ ಸಾಲಿನಲ್ಲಿರುವ ರವಿ ಕೂಡ್ಲಗಿ ನೆನಪುಗಳ ಕೃತಿ ರಚನೆಯಾಗಬೇಕು ಎಂದರು.

ಗಾಯಕ ಡಾ.ಅಶೋಕ ಹುಗ್ಗಣ್ಣವರ ಮಾತನಾಡಿದರು. ಚಂದ್ರಕಾಂತ ಬೆಲ್ಲದ ಅವರು ತಬಲಾ ವಾದಕ ಪಂ.ರವೀಂದ್ರ ಯಾವಗಲ್​ ಅವರಿಗೆ ಪಂ.ರವಿ ಕೂಡ್ಲಿಗಿ ಪ್ರಶಸ್ತಿ ಪ್ರದಾನ ಮಾಡಿದರು. ಮಲ್ಲಿಕಾರ್ಜುನ ಸೊಲಗಿ, ಡಾ. ಸತೀಶ ಜಾಧವ, ಡಾ.ಬಸವರಾಜ ಕಲೆಗಾರ, ಡಾ.ಶಾಂತಾರಾಮ ಹೆಗಡೆ, ಡಾ.ಬಾಳಣ್ಣ ಶೀಗಿಹಳ್ಳಿ, ಮಲ್ಲಿಕಾರ್ಜುನ ಚಿಕ್ಕಮಠ, ಡಾ.ಶಕ್ತಿ ಪಾಟೀಲ, ಉಸ್ತಾದ್​ ಶಫೀಕ್​ಖಾನ್​, ಡಾ. ರಾಜಶೇಖರ ಜಾಡರ, ವೀರಣ್ಣ ಪತ್ತಾರ, ವೇಣುಗೋಪಾಲ ಜೋಶಿ, ಪ್ರಕಾಶ ಬಾಳಿಕಾಯಿ, ರತ್ನಾ ಪಾಟೀಲ, ಅರವಿಂದ ದೇಶಮುಖ, ಡಾ. ಗುರುಬಸವ ಮುರಗಿ, ಇತರರು ಇದ್ದರು.

ನಂತರ ಪ್ರಶಸ್ತಿ ಪುರಸತ ಪಂ.ರವೀಂದ್ರ ಯಾವಗಲ್​ ತೀನತಾಲದಲ್ಲಿ ವಿಶೇಷವಾಗಿ ಪೇಶ್ಕಾರ, ಕಾಯ್ದಾ, ತುಕಡಾ, ಚಕ್ರದಾರ್​ ಪ್ರಸ್ತುತ ಪಡಿಸಿದರು. ಡಾ.ಎ.ಎಲ್​.ದೇಸಾಯಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net