ಭಾರತೀಯ ಸೇನೆ ಕಾರ್ಯಕ್ಕೆ ಶ್ಲಾಘನೀಯ

bbgd 7-1
ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಬಸವನಬಾಗೇವಾಡಿಯಲ್ಲಿ ರಾಷ್ಟ್ರೀಯ ಬಸವಸೈನ್ಯದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಆರ್.ಇ. ಬಿರಾದಾರ್ ಜಮಾತೆ ಇಸ್ಲಾಂ ಅಧ್ಯಕ್ಷ ಸಲೀಂ ಸೈಯದ್ ಮಾತನಾಡಿದರು. ರಾಷ್ಟ್ರೀಯ ಬಸವಸೈನ್ಯದ ಮುಖಂಡರಾದ ತಾಲೂಕು ಅಧ್ಯಕ್ಷ ಸಂಜುಗೌಡ ಬಿರಾದಾರ, ಶಂಕರಗೌಡ ಪಾಟೀಲ ಇತರರಿದ್ದರು.
Published on

ಬಸವನಬಾಗೇವಾಡಿ: ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ರಾಷ್ಟ್ರೀಯ ಬಸವಸೈನ್ಯ ಸಂಘಟನೆಯಿಂದ ವಿಜಯೋತ್ಸವ ಆಚರಿಸಲಾಯಿತು.

ಪಟ್ಟಣದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರ ಜಮಾಯಿಸಿ ರಾಷ್ಟ್ರೀಯ ಬಸವಸೈನ್ಯದ ಕಾರ್ಯಕರ್ತರು ಭಾರತ ಮಾತಾ ಕಿ ಜೈ, ಭಾರತೀಯ ಸೈನ್ಯಕ್ಕೆ ಜೈ, ಪಾಪಿ ಪಾಕಿಸ್ತಾನಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ನಮ್ಮ ಹೆಮ್ಮೆಯ ಭಾರತೀಯ ಸೈನ್ಯ ಪಾಕಿಸ್ತಾನದ ಭಯೋತ್ಪಾದಕ ಕೇಂದ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಉಗ್ರರ ಅಡುಗು ತಾಣಗಳನ್ನು ನಾಶಪಡಿಸಿದ ಭಾರತೀಯ ಸೈನ್ಯದ ಕಾರ್ಯ ಶ್ಲಾಘನೀಯವಾಗಿದ್ದು ಎಂದರು.

ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಆರ್.ಇ. ಬಿರಾದಾರ್ ಜಮಾತೆ ಇಸ್ಲಾಂ ಅಧ್ಯಕ್ಷ ಸಲೀಂ ಸೈಯದ್ ಮಾತನಾಡಿದರು. ರಾಷ್ಟ್ರೀಯ ಬಸವಸೈನ್ಯದ ಮುಖಂಡರಾದ ತಾಲೂಕು ಅಧ್ಯಕ್ಷ ಸಂಜುಗೌಡ ಬಿರಾದಾರ, ಶಂಕರಗೌಡ ಪಾಟೀಲ, ಸುನೀಲ ಚಿಕ್ಕೊಂಡ, ಸಂಗಮೇಶ ಜಾಲಗೇರಿ, ಶಂಕರ ರಜಪೂತ, ಅಪ್ಪು ಗಬ್ಬೂರ, ಸುರೇಶ ಹೂಗಾರ, ಮಂಜು ಜಾಲಗೇರಿ, ಅರುಣ ಗೊಳಸಂಗಿ, ಸಿದ್ರಾಮ ಪಾತ್ರೋಟಿ, ಸಂಗನಬಸು ಪೂಜಾರಿ, ಬಸವರಾಜ ರೇವಡಿಗಾರ ನವೀನ್ ಬೇವನೂರ, ವಿಜಯ ರಗಟಿ, ವಿರೇಶ್ ಗಬ್ಬುರ, ಮಹಾದೇವ ನಾಯ್ಕೋಡಿ, ಮಲ್ಲು ಬನಾಸಿ, ಮನ್ನಾನ ಶಾಬಾದಿ, ಸದಾನಂದ ಸುಲಾಖೆ, ನವೀನ ಬೇವನೂರ, ರ್ಇಾನ್ ಕೊರಬು, ಶಫೀಕ್ ಹೊಕ್ರಾಣಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net