ರೈತರು, ಸೈನಿಕರು ದೇಶದ ಎರಡು ಕಣ್ಣಿದಂತೆ: ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಬಣ್ಣನೆ

Indian Army Day Mandya
Published on

ಮಂಡ್ಯ: ಅನ್ನಕೊಡುವ ರೈತರು ಮತ್ತು ಜೀವ ಕಾಯುವ ಸೈನಿಕರು ದೇಶದ ಎರಡು ಕಣ್ಣುಗಳಿದಂತೆ. ಇವರಿಬ್ಬರೂ ದೇಶದ ಸಂಪತ್ತು ಹಾಗೂ ನಿಜವಾದ ಹೀರೋಗಳು ಎಂದು ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಬಣ್ಣಿಸಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಅಸೋಷಿಯೇಷನ್ ಆ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಜಿಲ್ಲೆಯಿಂದ ಆಯೋಜಿಸಿದ್ದ ಭಾರತೀಯ ಸೇನಾ ದಿನ ಮತ್ತು ರಾಷ್ಟ್ರೀಯ ರೈತರ ದಿನದ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆಯನ್ನು 1895 ಎ.1ರಂದು ಸ್ಥಾಪಿಸಲಾಯಿತು. ಮೊದಲ ಸೇನಾ ಮುಖ್ಯಸ್ಥರನ್ನು 1949ರಲ್ಲಿ ಪಡೆದುಕೊಂಡಿತು. 15 ಜ.1949ರಂದು ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರು ಜನರಲ್ ಫ್ರಾನ್ಸಿಸ್ ಬುಚರ್ ಅವರಿಂದ ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚ್ೀ ಅನ್ನು ವಹಿಸಿಕೊಂಡರು ಎಂದು ಸ್ಮರಿಸಿದರು.

ಭಾರತದ ಸುಮಾರು ಶೇ.60ರಷ್ಟು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಇಂತಹ ಪ್ರತಿ ರೈತನನ್ನು ಗೌರವಿಸುವ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಅವರ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ಮಾಜಿ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಅವರನ್ನು ನೆನಪಿಸಿಕೊಳ್ಳುವ ದಿನವಾಗಿದೆ ಎಂದು ನುಡಿದರು.

ಸಮಾರಂಭ ಉದ್ಘಾಟಿಸಿದ ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್ ಮಾತನಾಡಿ, ಭಾರತೀಯರಿಂದ ಭಾರತೀಯರಿಗಾಗಿಯೇ ಸೇವೆ ಸಲ್ಲಿಸುವುದು ಅಲಯನ್ಸ್ ಸಂಸ್ಥೆಯ ಧ್ಯೇಯವಾಗಿದೆ. ಕ್ಯಾನ್ಸರ್ ನಿರ್ಮೂಲನೆಗೆ ಆದ್ಯತೆ, ಅಗತ್ಯಯುಳ್ಳವರಿಗೆ ನೆರವು ನೀಡುವುದರ ಜತೆಗೆ ರಾಷ್ಟ್ರ, ಅಂತಾರಾಷ್ಟ್ರೀಯ ದಿನಗಳಲ್ಲಿ ತನ್ನದೇ ಆದ ಸೇವಾ ಚಟುವಟಕೆಗಳನ್ನು ರೂಪಿಸುವುದಾಗಿದೆ. ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಅಲಯನ್ಸ್ ಸಂಸ್ಥೆಯ ಶಾಖೆಗಳು ಇದ್ದು, ಲಕ್ಷಾಂತರ ಜನ ಸದಸ್ಯರು ವಿವಿಧ ಸೇವಾ ಕಾರ್ಯ ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಅನಿಕೇತನ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಡಾ.ರಾಮಲಿಂಗಯ್ಯ, ಅಲಯನ್ಸ್ ಸಂಸ್ಥೆಯ 1ನೇ ಜಿಲ್ಲಾ ಪ್ರಾಂತಪಾಲ ಮಾದೇಗೌಡ, ನಿವೃತ್ತ ಪ್ರಾಂಶುಪಾಲ ಎಚ್.ಅನಿಲ್ಕುಮಾರ್, ಸಂಪುಟ ಖಜಾಂಚಿ ರಕ್ಷಿತ್‌ರಾಜ್, ಪ್ರತಿಭಾಂಜಲಿ ಪ್ರೊ.ಡೇವಿಡ್ ಇತರರಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ಕೆ.ಮೂರ್ತಿ, ಸುಬ್ರಹ್ಮಣ್ಯ, ಎಂ.ರಮೇಶ್, ಆದರ್ಶ ಕೃಷಿಕ ಕೆ.ಎಸ್.ಸೋಮಶೇಖರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net