ವಿಶ್ವದಲ್ಲಿ ಭಾರತ ಶ್ರೀಮಂತ ರಾಷ್ಟ್ರವಾಗಲಿದೆ

tlk 26-1 a
ತಾಳಿಕೋಟೆ ಪಟ್ಟಣದಲ್ಲಿ ರಾಷ್ಟ್ರ ಭಕ್ತರಿಂದ ನಡೆದ ತಿರಂಗಾಯಾತ್ರೆಗೆ ಬಾಲಶಿವಯೋಗಿ ಶ್ರೀ ಸಿದ್ಧಲಿಂಗ ದೇವರು ಚಾಲನೆ ನೀಡಿದರು. ಟಿಎಲ್‌ಕೆ 26-3ಎ: ತಾಳಿಕೋಟೆ ಪಟ್ಟಣದಲ್ಲಿ ಸಾವಿರಾರು ದೇಶಭಕ್ತರು ಸೇರಿ ರಾಷ್ಟ್ರ ಧ್ವಜದೊಂದಿಗೆ ಹಾಗೂ 30 ಮಿಟರ್ ಉದ್ದದ ಬೃಹತ್ ತ್ರಿವರ್ಣ ಧ್ವಜದ ಮೆರವಣಿಗೆ ಆಕರ್ಷಕವಾಗಿತ್ತು.
Published on

ತಾಳಿಕೋಟೆ: ಭಾರತ ದೇಶ ಈಗಾಗಲೇ ವಿವಿಧ ದೇಶಗಳಿಂದ ಮೆಚ್ಚುಗೆ ಪಡೆಯುತ್ತ ಸಾಗಿದ್ದು ಬರುವ 2040ನೇ ಸಾಲಿನಲ್ಲಿ ವಿಶ್ವದಲ್ಲೇ ಭಾರತ ಶ್ರೀಮಂತ ರಾಷ್ಟ್ರವಾಗಲಿದೆ ಎಂದು ಮಾಜಿ ಶಾಸಕ ಎ.ಎಸ್. ಪಾಟೀಲ(ನಡಹಳ್ಳಿ) ಹೇಳಿದರು.

ಪಟ್ಟಣದಲ್ಲಿ ಜಾತಿ, ಪಕ್ಷ ಭೇದ ಮರೆತು ಸೋಮವಾರ ಏರ್ಪಡಿಸಿದ್ದ ತಿರಂಗಾ ಯಾತ್ರೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಭಾರತದಲ್ಲಿಯ ಭಯೋತ್ಪಾದನೆ ಸೋಲಿಸಿ ಭಾರತದ ಭದ್ರತೆಗಾಗಿ ನಿಲ್ಲಬೇಕೆಂಬ ಪಣ ತೊಟ್ಟ ದೇಶದ ಸೈನಿಕರು ಇತ್ತೀಚೆಗೆ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ್ದಲ್ಲದೆ, ದೇಶದ ಸಾಹಸಮಯ ಕಾರ್ಯ ಹೇಗಿದೆ ಎಂಬುದನ್ನು ಅರ್ಥೈಸಿ ತೋರಿಸಿದ್ದಾರೆಂದರು.

ಮಾಜಿ ಸೈನಿಕ ರಾಮನಗೌಡ ಬಿರಾದಾರ ಮಾತನಾಡಿ, 26 ಜನರಿಗೆ ಹೊಡೆದ ಪಾಕಿಸ್ತಾನದ ಮೇಲೆ ಇದ್ದಂತಹ ಸಿಟ್ಟು ಅಲ್ಲಿಯ 26 ಸಾವಿರ ಜನರಿಗೆ ಹೊಡೆದರೂ ನಮ್ಮ ಸಿಟ್ಟು ಹೋಗಲಾರದೆಂದರು.

ತಾಳಿಕೋಟೆ ಪಟ್ಟಣ ರಕ್ಕಸಗಿ ತಂಗಡಗಿ ಕಾಳಗದಿಂದ ಹೆಸರುವಾಸಿಯಾಗಿದೆ. ಈ ಭಾಗ ಯುದ್ಧದ ಭೂಮಿಯಾಗಿದ್ದು, ಈ ಭೂಮಿಯಲ್ಲಿ ಜನ್ಮತಾಳಿದ ನಾವು ಸಾಮಾನ್ಯವಲ್ಲ, ಶಕ್ತಿ ಕೇಂದ್ರವಾಗಿದ್ದ ತಾಳಿಕೋಟೆ ಪಟ್ಟಣ ಭಾಗದಲ್ಲಿನ ಅಂದಾಜು 200ಕ್ಕೂ ಮೇಲ್ಪಟ್ಟು ಸೈನ್ಯದಲ್ಲಿ ಸೇವೆಗೆ ಮುಂದಾಗಿದ್ದಾರೆ ಎಂದರು.

ಮಾಜಿ ಸೈನಿಕ ಶಾಂತಗೌಡ ಬಿರಾದಾರ, ಪಾರ್ವತಿ ಸೂಗೂರ ಹಾಗೂ ಬೋರಮ್ಮ ಕುಂಬಾರ, ಭಾಗ್ಯಶ್ರೀ ಪಾಟೀಲ ಮಾತನಾಡಿದರು.

ಕೆಸರಟ್ಟಿ ಶಂಕರಲಿಂಗ ಮಠದ ಶ್ರೀ ಸೋಮಲಿಂಗ ಮಹಾಸ್ವಾಮಿಗಳು, ಗುಂಡಕನಾಳದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ದೇಶ, ರಾಷ್ಟ್ರದ ವಿಚಾರ ಬಂದಾಗ ತಾಳಿಕೋಟೆಯಲ್ಲಿ ಒಂದೇ ಪಕ್ಷವಿರುತ್ತದೆ ಅದುವೇ ತಿರಂಗಾ. ದೇಶ, ಸಮಾಜಕ್ಕಾಗಿ ಹೋರಾಟ ಬಂದಾಗ ಎಲ್ಲರೂ ಒಗ್ಗೂಡಬೇಕಾಗಿದೆ ಎಂದು ತಿಳಿಸಿದರು.

ಶಿಕ್ಷಕ ಅಶೋಕ ಹಂಚಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಿರಂಗಾಧ್ವಜ ಯಾತ್ರೆಗೆ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ಧಲಿಂಗ ದೇವರು ಚಾಲನೆ ನೀಡಿದರು. ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವಿಸಲಾಯಿತು.

ಮಾಜಿ ಸೈನಿಕರಿಗೆ, ವೀರ ನಾರಿಯರಿಗೆ, ಸಶಸ್ತ್ರಪಡೆ ಸೈನಿಕರ ಕುಟುಂಬದವರು ಸೇರಿ 200 ಕ್ಕೂ ಹೆಚ್ಚು ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಪಾಲ ಸಂಗ್ಮಿ, ಉಪಾಧ್ಯಕ್ಷ ಶಿವಪ್ಪ ಅಂಗಡಿ, ಕಾರ್ಯದರ್ಶಿ ಬಾಪುಗೌಡ ಪಾಟೀಲ, ಸಶಸ್ತ್ರ ಪಡೆ ಅಧ್ಯಕ್ಷ ರಾಮನಗೌಡ ಬಿರಾದಾರ, ಉಪಾಧ್ಯಕ್ಷ ಸಂಭಾಜಿ ಡಿಸಲೆ, ಕಾರ್ಯದರ್ಶಿ ಸಂಗಣ್ಣ ಫೀರಾಪೂರ, ಎನ್‌ಸಿಸಿ ವಿದ್ಯಾರ್ಥಿಗಳು ಸೇರಿ ಎಲ್ಲ ನಾಗರಿಕರು 30 ಮೀಟರ್ ಉದ್ದದ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ನಡೆಸಿದರು.

ಶಿಕ್ಷಕ ಸಾಹೇಬಗೌಡ ಬಿರಾದಾರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net