ಆಹಾರ ಉತ್ಪಾದನೆಯಲ್ಲಿ ಭಾರತ ಅಗ್ರಸ್ಥಾನ

India tops in food production
ವಿಜಯಪುರದಲ್ಲಿ ವಿಜಯವಾಣಿ ಆಯೋಜಿಸಿದ್ದ ಎಜುಕೇಶನ್​ ಎಕ್ಸ್​ಪೋದಲ್ಲಿ ಡಾ. ಅಶ್ವತ್ಥಾಮ ವಿ.ಎಸ್​. ಮಾತನಾಡಿದರು.
Published on

ವಿಜಯಪುರ: ಆಹಾರ ಉತ್ಪಾದನೆಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ ಎಂದು ಕೃಷಿ ವಿಜ್ಞಾನ ಕಾಲೇಜಿನ ಅಸೋಸಿಯೇಟ್​ ಪ್ರೊೆಸರ್​ ಡಾ.ಅಶ್ವತ್ಥಾಮ ವಿ.ಎ. ಹೇಳಿದರು.

ನಗರದ ಸದಾಶಿವ ನಗರದಲ್ಲಿನ ಕಿತ್ತೂರು ರಾಣಿ ಸಮುದಾಯ ಭವನದ ಸಭಾಭವನದಲ್ಲಿ ವಿಜಯಪುರದ ಎಕ್ಸಲೆಂಟ್​ ಸಮೂಹ ಸಂಸ್ಥೆ ಪ್ರಮುಖ ಪ್ರಾಯೋಜಕತ್ವ ಹಾಗೂ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸಹಯೋಗದಲ್ಲಿ ವಿಜಯವಾಣಿ ಹಮ್ಮಿಕೊಂಡಿದ್ದ ಎಜುಕೇಶನ್​ ಎಕ್ಸ್ಸ್​ಪೋದಲ್ಲಿ ಆಹಾರ ಉತ್ಪಾದನೆ ಹಾಗೂ ಕೃಷಿ ವಿಜ್ಞಾನ ಕ್ಷೇತ್ರದಲ್ಲಿರುವ ವಿಪುಲ ಅವಕಾಶಗಳ ವಿಷಯ ಕುರಿತು ಗುರುವಾರ ಮಾತನಾಡಿದರು.

ದೇಶದಲ್ಲಿ ಪ್ರತಿ ವರ್ಷ 34.2 ಕೋಟಿ ಟನ್​ ಆಹಾರ ಉತ್ಪಾದನೆಯಾಗುತ್ತಿದೆ. ಅತಿ ಹೆಚ್ಚು ಆಹಾರ ಉತ್ಪಾದಿಸುವ ದೇಶಗಳ ಸಾಲಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ದೇಶದ 145 ಕೋಟಿ ಜನರಿಗೆ ಸಮರ್ಪಕ ಆಹಾರ ಒದಗಿಸಿ, ವಿದೇಶಗಳಿಗೂ ರ್ತು ಮಾಡುವ ಸಾಮರ್ಥ್ಯ ನಮ್ಮ ದೇಶದ ರೈತರಲ್ಲಿದೆ ಎಂದು ಬಣ್ಣಿಸಿದರು.

ಹೆಚ್ಚು ಆಹಾರ ಉತ್ಪಾದನೆಯಲ್ಲಿ ರೈತರ ಪಾತ್ರ ಪ್ರಮುಖವಾಗಿದೆ. ರೈತನ ಯಶಸ್ಸಿನ ಹಿಂದೆ ಕೃಷಿ ವಿಜ್ಞಾನಿಗಳಿದ್ದಾರೆ. ಕೃಷಿಕರು ದೇಶದ ದೊಡ್ಡ ಶಕ್ತಿ. ಹೊಸ ತಂತ್ರಜ್ಞಾನ ಬಳಸಿಕೊಂಡು ಇನ್ನಷ್ಟು ಬಲಶಾಲಿಯಾಗಬೇಕು. ಹೆಚ್ಚಿನ ಆಹಾರ ಉತ್ಪಾದನೆಗೆ ಮುಂದಾಗಬೇಕು ಎಂದು ರೈತರಿಗೆ ಸಲಹೆ ನೀಡಿದರು.

ಕೃಷಿ ವಿಜ್ಞಾನಿಗಳ ಸಲಹೆಯಂತೆ ರೈತರು ರಾಸಾಯನಿಕ ಬಳಕೆ ಮಾಡಬೇಕು. ಹೆಚ್ಚು ಇಳುವರಿ ಬರಲಿ ಎಂದು ಹೆಚ್ಚು ರಸಾಯನಿಕ ಬಳಸುವುದರಿಂದ ವಿಷ ಆಹಾರ ಉತ್ಪಾದನೆಗೆ ಪ್ರೇರಣೆ ನೀಡಿದಂತಾಗುತ್ತದೆ.ಉತ್ತಮ ಆಹಾರ ಉತ್ಪಾದನೆ ದೇಶದ ಪ್ರಗತಿಗೆ ಪೂರಕವಾಗಿದ್ದು, ದೇಶದ ಜನತೆಯ ಆರೋಗ್ಯ ಕಾಪಾಡುವುದೇ ಕೃಷಿ ಇಲಾಖೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಮನುಷ್ಯನಿಗೆ ಅನ್ನ ಮುಖ್ಯ. ಹೀಗಾಗಿ ದೇಶವನ್ನಾಳುವವರು ಆಹಾರ ಭದ್ರತೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಯಾವ ದೇಶದಲ್ಲಿ ಆಹಾರದ ಕೊರತೆ ಇದೆಯೋ ಅಲ್ಲಿ ಬಡತನ ತಾಂಡವವಾಡುತ್ತದೆ ಎಂದರು.

ವಿದ್ಯಾರ್ಥಿಗಳಿಗೆ ಕೃಷಿ ವಲಯದಲ್ಲಿ ಸಾಕಷ್ಟು ಅವಕಾಶಗಳಿವೆ, ಬಿಎಸ್​ಸಿ ಅಗ್ರಿ ಹೊರತು ಪಡಿಸಿಯೂ ಅನೇಕ ಸರ್ಟಿಫಿಕೆಟ್​ ಕೋರ್ಸ್​ಗಳಿವೆ. ಹೈನುಗಾರಿಕೆ, ಮೀನು ಸಾಕಣೆ, ತೋಟಗಾರಿಕೆಗೆ ಸಂಬಂಧಿಸಿದ ಕೋರ್ಸ್​ಗಳಿವೆ. ಎಲ್ಲರೂ ಇಂಜಿನಿಯರಿಂಗ್​, ವೈದ್ಯಕಿಯ ಕೋರ್ಸ್​ನತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ಜೀವನ ರೂಪಿಸಿಕೊಳ್ಳಲು ಕೃಷಿ ಕ್ಷೇತ್ರದಲ್ಲೂ ಸಾಕಷ್ಟು ಅವಕಾಶಗಳಿದ್ದು, ಈ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net