ದುಬೈ ಮಾದರಿ ಕಾಯ್ದೆ ಭಾರತಕ್ಕೆ ಬೇಕು; ಸಿರಿಗೆರೆ ಶ್ರೀ ಆಗ್ರಹ

SIRIGERE SWAMIJI (2)
Published on

ಚಿತ್ರದುರ್ಗ: ಕೈಗಾರಿಕಾ ಭೂಮಿಗೆ ರೈತನೇ ಮೂಲ ಮಾಲೀಕನಾಗಿರಬೇಕು ಎಂಬ ದುಬೈ ಮಾದರಿ ಕಾಯ್ದೆಯನ್ನು ಜಾರಿಗೊಳಿಸುವಂತೆ ತರಳಬಾಳು ಮಠದ ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ‌್ಯ ಸ್ವಾಮೀಜಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದರು.

ಸಿರಿಗೆರೆಯಲ್ಲಿ ಭಾನುವಾರ ಹಮ್ಮಿಕೊಡಿದ್ದ ಶ್ರೀ ಶಿವಕುಮಾರ ಶಿವಾಚಾರ‌್ಯ ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಸಮಾರಂಭ ಹಾಗೂ ರೈತರ ಸಮಾವೇಶ ಸಾನ್ನಿಧ್ಯ ವಹಿಸಿ ಮಾತನಾಡಿ, ಭೂ ಸ್ವಾಧೀನದ ಬಳಿಕ ಕೊಡುವ ಇಡುಗಂಟಿನಿಂದ ರೈತರು ಬೀದಿಗೆ ಬೀಳುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಿರ್ದಿಷ್ಟ ಮೊತ್ತವನ್ನು ರೈತರಿಗೆ ಪ್ರತಿ ವರ್ಷ ಕೊಡುವಂತಾಗಬೇಕು, ಕೈಗಾರಿಕೆ ಸ್ಥಗಿತಗೊಂಡರೆ ರೈತನಿಗೆ ಹಿಂತಿರುಗಿಸಬೇಕು. ಇದಕ್ಕಾಗಿ ರೈತರು-ಉದ್ದಿಮೆದಾರ ನಡುವೆ ಎಂಯುಒ ಆಗಬೇಕು. ಭೂ ಸ್ವಾಧೀನದಿಂದ ಉದ್ದಿಮೆದಾರರು ಪಡೆದಿರುವ ಲಾಭದ ಬಗ್ಗೆ ತನಿಖೆ ಆಗಬೇಕೆಂದ ಶ್ರೀಗಳು, ಭೂಮಿ ಬಳಕೆ ಕುರಿತ ಅಂಕಿ ಅಂಶಗಳನ್ನು ಸಂಗ್ರಹಿಸುವಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಮಾಜಿ ಸಚಿವ ಎಚ್.ಆಂಜನೇಯ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಯು.ಬಿ.ಬಣಕಾರ್, ಬಿ.ವೈ.ವಿಜಯೇಂದ್ರ, ಎಂ.ಚಂದ್ರಪ್ಪ, ಡಿ.ಜಿ.ಶಾಂತನಗೌಡ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net