ಪ್ರಬಲ ನಾಯಕತ್ವ, ಜಾಗತಿಕ ಸಹೋದರತ್ವದೊಂದಿಗೆ ಸಾಗುತ್ತಿರುವ ಭಾರತ

IMG_20251003_230924.jpg
Published on

ಚಿಕ್ಕಬಳ್ಳಾಪುರ: ಜಗತ್ತು ಘರ್ಷಣೆಗಳು, ಸ್ಪರ್ಧೆ ಮತ್ತು ಸಂಕುಚಿತ ಸ್ವಾರ್ಥಗಳಿಂದ ವಿಭಜನೆಯಾಗುತ್ತಿರುವ ಸಂದರ್ಭದಲ್ಲಿ ಭಾರತವು ಜಾಗತಿಕ ಸಹೋದರತ್ವದೊಂದಿಗೆ ಸಾಗುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಲೋಕಸೇವಾ ಸಂಸ್ಥೆಯ ಪ್ರೇಮಾಮೃತಮ್‌ ಸಭಾಂಗಣದಲ್ಲಿ ಕೈಗೊಂಡಿದ್ದ ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವದ 49ನೇ ದಿನವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಪ್ರಬಲ ನಾಯಕತ್ವದೊಂದಿಗೆ ಭಾರತವು ಜಾಗತಿಕವಾಗಿ ಮುಂಚೂಣಿಯಲ್ಲಿ ಸಾಗುತ್ತಿದೆ. ಇದಕ್ಕೆ ದಿಟ್ಟ ನಿರ್ಧಾರಗಳು, ಪರಿಣಾಮಕಾರಿ ಯೋಜನೆಗಳು, ದೇಶದ ಜನರ ಸಹಭಾಗಿತ್ವ ಹಾಗೂ ಸ್ಪಂದನೆಯು ಮುಖ್ಯ ಕಾರಣ ಎಂದು ತಿಳಿಸಿದ್ದಾರೆ.
ಭಾರತವು ಕಾಲಾತೀತ ಜ್ಞಾನವನ್ನು ಮಾನವೀಯತೆಯೊಂದಿಗೆ ಹಂಚಿಕೊಳ್ಳುವ ವಿಶಿಷ್ಟ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ. ಇದಕ್ಕೆ ಅನ್ನ, ಶಿಕ್ಷಣ, ಆರೋಗ್ಯ, ಆಧ್ಯಾತ್ಮಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸತ್ಯಸಾಯಿ ಸಂಸ್ಥೆಯು ಜಾಗತಿಕವಾಗಿ ಉನ್ನತ ಕೊಡುಗೆಯನ್ನು ನೀಡುತ್ತಿರುವುದು ಒಂದು ನಿದರ್ಶನ ಎಂದಿದ್ದಾರೆ.
ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿ, ಖನಿಜ, ಉಡುಪುಗಳವರೆಗೆ, ವೈದ್ಯಕೀಯ, ಖಗೋಳಶಾಸ್ತ್ರ ಸೇರಿದಂತೆ ಮಹತ್ವದ ಎಲ್ಲ ಕ್ಷೇತ್ರಗಳಲ್ಲೂ ಜ್ಞಾನ ಕೇಂದ್ರದ ಭಾರತವು ಮಹತ್ತರವಾದ ಕೊಡುಗೆ ಇಲ್ಲಿನ ವಿಶ್ವವಿದ್ಯಾಲಯಗಳು ಪೂರ್ವ ಮತ್ತು ಪಶ್ಚಿಮ ದೇಶಗಳ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ಕಲಿಸುತ್ತಿವೆ. ಭಾರತೀಯ ಶಿಕ್ಷಕರಿಂದ ಕಲಿಯಲು ಸಾವಿರಾರು ಮೈಲುಗಳಷ್ಟು ದೂರ ಪ್ರಯಾಣಿಸಿ ಇಲ್ಲಿಗೆ ಬರುತ್ತಿದ್ದು ದೇಶದ ಶಕ್ತಿಯನ್ನು ಮತ್ತಷ್ಟು ಹೆಚ್ಚಿಗೆ ಗುರುತಿಸುವ ಸಮಯ ಬಂದಿದೆ ಎಂದು ತಿಳಿಸಿದ್ದಾರೆ.
ಜಗತ್ತನ್ನು ವಸುಧೈವ ಕುಟುಂಬಕಂ ಮಹಾನ್ ಕಲ್ಪನೆಯಲ್ಲಿ ಒಗ್ಗೂಡಿಸಬೇಕಾದ ಪ್ರಧಾನಿ ನರೇಂದ್ರ ಮೋದಿ ಸಂದೇಶವನ್ನು ಸಾಕಾರಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.

*ಜಾಗತಿಕ ಮಾನವೀಯ ಪುರಸ್ಕಾರ
ವಿಯೆಟ್ನಾಂ ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಗುಯೆನ್ ವ್ಯಾನ್ ಡಂಗ್ ಗೆ ಒಂದು 'ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net