ಭಾರತವು ಅತಿದೊಡ್ಡ ಉತ್ಪಾದಕ ರಾಷ್ಟ್ರ

h12-k.h.patil college
Published on

ಹುಬ್ಬಳ್ಳಿ: ನಗರದ ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್. ಪಾಟೀಲ ವಾಣಿಜ್ಯ ಪದವಿ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ವಾರ್ಷಿಕ ಸ್ನೇಹ ಸಮ್ಮೇಳನ ಏರ್ಪಡಿಸಲಾಗಿತ್ತು.

ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠ ಟ್ರಸ್ಟ್ ಕಮಿಟಿ ಚೇರ್ಮನ್ ಚನ್ನವೀರ ಮುಂಗರವಾಡಿ ಉದ್ಘಾಟಿಸಿ ಮಾತನಾಡಿ, ಭಾರತ ದೇಶದ ಒಟ್ಟು ಜನಸಂಖ್ಯೆಯ ಶೇ. 65ರಷ್ಟು ಯುವಕರಿದ್ದಾರೆ. ಈಗ ನಮ್ಮ ದೇಶವು ಅತಿ ದೊಡ್ಡ ಉತ್ಪಾದಕ ರಾಷ್ಟವಾಗಿ ಹೊರಹೊಮ್ಮಿದೆ. ವಾಣಿಜ್ಯ ಪದವಿ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ. ಉದ್ಯೋಗ ಅರಸುವುದರ ಬದಲು ಉದ್ಯೋಗದಾತರಾಗುವ ಕಡೆಗೆ ಗಮನ ಹರಿಸಬೇಕು ಎಂದರು.

ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಜಿ.ಬಿ. ಗೌಡಪ್ಪಗೊಳ ಮಾತನಾಡಿ, ಭಾರತ ಸದೃಢ ರಾಷ್ಟ್ರ. ವಿಶ್ವದಲ್ಲಿಯೇ ನಾಲ್ಕನೆಯ ದೊಡ್ಡ ಆರ್ಥಿಕತೆಯ ದೇಶವಾಗಿದೆ. ವಾಣಿಜ್ಯ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಬದಲಾಗುತ್ತಿರುವ ಜಗತ್ತಿನ ಬೇಡಿಕೆಗೆ ಅನುಸಾರವಾಗಿ ಜ್ಞಾನ ಮತ್ತು ಕೌಶಲ ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದರು.

ವೇಮನ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಆರ್.ಕೆ. ಪಾಟೀಲ ಮಾತನಾಡಿ, ವಿಜ್ಞಾನ ವಿಭಾಗಕ್ಕಿಂತಲೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅವಕಾಶಗಳು ಹೆಚ್ಚಾಗಿವೆ. ಕೇವಲ ಅಂಕ ಗಳಿಸುವುದು ಅಷ್ಟೇ ಅಲ್ಲದೆ ಕೌಶಲ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ಥಾನಿಕ ಆಡಳಿತ ಮಂಡಳಿ ನಿರ್ದೇಶಕರಾದ ಜಿ.ಕೆ. ದೊಡ್ಡಗೌಡ್ರ, ಕೆ.ವಿ. ಪಾಟೀಲ, ರಾಜೇಂದ್ರ ರೆಡ್ಡಿ, ಕಾಲೇಜ್ ಒಕ್ಕೂಟ ಕಾರ್ಯದರ್ಶಿ ಪ್ರಿಯಾಂಕ ಕಿರೆಸೂರ, ಉಪನ್ಯಾಸಕರಾದ ವೇದಾ ಹುಡೇದ, ರವಿ ದೊಡ್ಡಬಿದರಿ, ಪವನ ಧಮಾಮ, ಗುರು ಹಂಜಗಿಮಠ, ಕಾವ್ಯ ಪ್ಯಾಟಿಮಠ, ಶಂಕರ ಕುಂಬಾರ, ಸಚಿನ ಮಾಚಾ, ಸುನಿತಾ ಗಬ್ಬೂರ, ಶಾರದಾ ನಿರ್ವಾನಿ, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಚೈತ್ರ ಅಸುಂಡಿ, ಮೋಹನ ಚಂದುಕರ ಉಪಸ್ಥಿತರಿದ್ದರು.

ಪ್ರಾಚಾರ್ಯ ಎಸ್.ಬಿ. ಸಣಗೌಡರ ಅತಿಥಿಗಳನ್ನು ಸ್ವಾಗತಿಸಿದರು. ಜ್ಯೋತಿ ಕೊಪ್ಪದಗಾಣಿಗೇರ ವಂದಿಸಿದರು. ಉಪನ್ಯಾಸಕಿಯರಾದ ಪ್ರಿಯಾಂಕಾ ನವಲಗುಂದ, ಚೇತನಾ ಮೂಕಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net