ಯೋಗದ ತವರು ನೆಲ ಭಾರತ

india-is-the-home-of-yoga
Published on

ಲಕ್ಷ್ಮೇಶ್ವರ: ವಿಶ್ವ ಯೋಗ ದಿನವನ್ನು ಜೂ. 21ರಂದು ಆಚರಿಸುತ್ತಿದ್ದು,ತಾಲೂಕಿನಾದ್ಯಂತ ಯೋಗ ದಿನಾಚರಣೆಗೆ ಭರದ ಸಿದ್ಧತೆಗಳು ನಡೆದಿವೆ. ಪಟ್ಟಣದಲ್ಲಿ ತಾಲೂಕು ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಶಿರಹಟ್ಟಿ, ಯೋಗ ಸಮಿತಿ ಹಾಗೂ ಸ್ಥಳೀಯ ಶಾಲೆಗಳ ವತಿಯಿಂದ ಗುರುವಾರ ಯೋಗ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ನಗರ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ವತಿಯಿಂದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಫಲಕ ಹಿಡಿದು ಘೋಷಣೆ ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು. ತಹಸೀಲ್ದಾರ್ ವಾಸುದೇವ ಸ್ವಾಮಿ ಮಾತನಾಡಿ, ಜಗತ್ತಿಗೆ ಭಾರತವು ನೀಡಿದ ಶ್ರೇಷ್ಠ ಕೊಡುಗೆಗಳಲ್ಲಿ ಯೋಗವು ಒಂದು. ಯೋಗದ ತವರು ನೆಲವಾಗಿರುವ ಭಾರತದಲ್ಲಿ ಯೋಗದ ಮಹತ್ವವನ್ನು ನಾವೆಲ್ಲ ಅರಿತು ಆಚರಿಸಬೇಕಾಗಿದೆ ಎಂದರು.

ಬಿಆರ್‌ಪಿ ಈಶ್ವರ ಮೆಡ್ಲೇರಿ ಮಾತನಾಡಿ, ಬೃಹತ್ ಯೋಗ ಪ್ರದರ್ಶನವನ್ನು ಬೆಳಗ್ಗೆ 6.30ಕ್ಕೆ ತಾಯಿ ಪಾರ್ವತಿ ಮಕ್ಕಳ ಬಳಗದ ತೋಂಟದೇವರ ಮಠದ ಆವಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಸಂಘಗಳ ಪದಾಧಿಕಾರಿಗಳಾದ ಎಸ್.ಡಿ. ಲಮಾಣಿ, ಎಚ್.ಎಂ. ಗುತ್ತಲ, ಮುಖ್ಯೋಪಾಧ್ಯಾಯರಾದ ಬಿ.ಎಂ. ಕುಂಬಾರ, ಐ.ಬಿ. ಜಕ್ಕನಗೌಡ್ರ, ಎಸ್.ಎಸ್. ಜಿರಂಕಳ್ಳಿ, ಡಿ.ಎನ್. ದೊಡ್ಡಮನಿ, ಕೆ.ಡಿ. ಕಗ್ಗಲಗೌಡ್ರು, ಎಸ್.ಎಸ್. ಉಪ್ಪಿನ, ನಾಗರಾಜ ಮಜ್ಜಿಗುಡ್ಡ, ಯೋಗ ಸಾಧಕ ಸಮಿತಿಯ ಬಸವರಾಜ ಸಂಗಪ್ಪಶೆಟ್ರ, ನಾಗರಾಜ ಸೂರಣಗಿ ಭಾಗವಹಿಸಿದ್ದರು. ಸಿಆರ್‌ಪಿ ಉಮೇಶ ನೇಕಾರ ನಿರೂಪಿಸಿದರು. ಉರ್ದು ಸಿಆರ್‌ಪಿ ಎನ್.ಎ. ಮುಲ್ಲಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net