

ಗೋಕಾಕ: ನಗರದಲ್ಲಿ ಶ್ರೀ ಸಾಯಿ ಸಮರ್ಥ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಕಾಶಿ ಮಾದರಿ ಗಂಗಾ ಆರತಿಗೆ ಸೋಮವಾರ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ ನೀಡಿದರು.
ಫೌಂಡೇಶನ್ ಅಧ್ಯಕ್ಷ ಅರುಣ ಸಾಲ್ಲಳ್ಳಿ ಮಾತನಾಡಿ, ಭಾರತ ಪುಣ್ಯಕ್ಷೇತಗಳ ತವರೂರಾಗಿದೆ. ಅಂತಹ ಪುಣ್ಯಭೂಮಿಯ ಉತ್ತರ ಕರ್ನಾಟಕದಲ್ಲಿ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿಗಳು ಹರಿದಿವೆ. ಹೀಗಾಗಿ,ಘಟಪ್ರಭಾ ನದಿ ಗಂಗಾರತಿ ಕಣ್ಮುಂಬಿಕೊಂಡು ಜನರು ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಆನಂದ ಪಾಟೀಲ, ಸಂಜು ಚಿಪ್ಪಲಕಟ್ಟಿ , ಶಾಂತಾ ಪಾಟೀಲ, ಅನುಪಾಕ ಕೌಶಿಕ್, ಕವಿತಾ ಬಾಡಗಂಡಿ, ಲಕ್ಷಿ$್ಮ ಮುತ್ಯಾಗೋಳ, ಭಾರತಿ ಕೊಳವೆ ಇತರರಿದ್ದರು.