ಎಲ್ಲಾ ನಾಟಕಗಳಿಗೆ ಮೂಲ ಆಧಾರವೇ ಭಾರತ: ಡಾ.ಚಂದ್ರಶೇಖರ ಕಂಬಾರ

chandrashekhar-kambar
Published on

ಬೆಂಗಳೂರು: ಎಲ್ಲಾ ನಾಟಕಗಳಿಗೆ ಮೂಲ ಆಧಾರವೇ ಭಾರತ ಮತ್ತು ಕರ್ನಾಟಕವಾಗಿದ್ದು, ಕನ್ನಡ ನಾಟಕ ಕ್ಷೇತ್ರ ವಿಶಾಲವಾಗಿ ಬೆಳೆಯಲು ಎಲ್ಲರೂ ಸಹಕರಿಸಬೇಕೆಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹೇಳಿದರು.


ಬೆಂಗಳೂರು ನಗರ ವಿಶ್ವವಿದ್ಯಾಲಯ ಶುಕ್ರವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ಕನ್ನಡ ನಾಟಕ ಕ್ಷೇತ್ರ ವಿಶಾಲವಾಗಿದ್ದು, ಇದು ಮತ್ತಷ್ಟು ವಿಸ್ತಾರಗೊಳ್ಳಬೇಕು. ಕನ್ನಡ ವಚನಗಳು ಸುಮಾರು ೮೦ ಭಾಷೆಗಳಿಗೆ ಪರಿಚಯವಿದೆ. ಕನ್ನಡ ಭಾಷೆ ಇಡೀ ಜಗತ್ತಿಗೆ ಪರಸರಿಸಬೇಕೆಂದರು.


ಗೀತ ರಚನೆಕಾರ ಡಾ.ನಾಗೇಂದ್ರ ಪ್ರಸಾದ್ ಮಾತನಾಡಿ, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಕನ್ನಡ ನಾಡು, ನುಡಿಯನ್ನು ಕಟ್ಟುವಲ್ಲಿ ಬಹಳ ಪ್ರಮುಖ ಸ್ಥಾನವನ್ನು ಹೊಂದಿವೆ. ಕನ್ನಡ ರಾಜ್ಯೋತ್ಸವ ಕೇವಲ ಹಾಡುಗಳಿಗೆ ಸೀಮಿತವಾಗಬಾರದು. ಕನ್ನಡ ಬಳಸಬೇಕು. ಮಾತನಾಡಬೇಕು. ಉಳಿಸಬೇಕು. ಮಾತೃ ಭಾಷೆಗೆ ಕಲ್ಪನಾ ಶಕ್ತಿ ಮತ್ತು ಸೃಜನಶೀಲ ಶಕ್ತಿ ಇದೆ ಎಂದರು.


ಬೆಂ.ನಗರ ವಿವಿ ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ಕುಲಸಚಿವ ಟಿ.ಜವರೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net