ಬಲಾಢ್ಯ ರಾಷ್ಟ್ರದತ್ತ ಭಾರತ ದಾಪುಗಾಲು

17Ankalagi1
Published on

ಅಂಕಲಗಿ: ಪ್ರಸ್ತುತ ದಿನಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದಕ್ಷ ಆಡಳಿತದ ಲವಾಗಿ ಜಗತ್ತಿನಲ್ಲಿ ಭಾರತ ಬಲಾಢ್ಯ ರಾಷ್ಟ್ರವಾಗಿ ಪ್ರಗತಿಪಥದತ್ತ ಸಾಗುತ್ತಿದೆ ಎಂದು ಗೋಕಾಕ ಬಿಜೆಪಿ ತಾಲೂಕಾಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹೇಳಿದರು.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಅಂಗವಾಗಿ ಬುಧವಾರ ರೋಗಿಗಳಿಗೆ ಹಣ್ಣು ವಿತರಿಸಿ ಮಾತನಾಡಿದರು.

ಮುಖ್ಯ ವೈದ್ಯಾಧಿಕಾರಿ ಡಾ.ಪ್ರದ್ಯುಮ್ನ ಬಿರಾದಾರ, ಡಾ.ಕಮಲಾಕ್ಷಿ ತಲ್ಲೂರ, ಬಿಜೆಪಿ ವೀರನಗೌಡ ಈಶ್ವರಪ್ಪಗೋಳ, ಆನಂದ ಅತ್ತುಗೋಳ, ಗಂಗಪ್ಪ ಅಂಗಡಿ, ರಮೇಶ ನಿರ್ವಾಣಿ, ಬಸು ದಾಸನವರ, ಬಸವರಾಜ ಕೊಳವಿ, ಗೋಪಾಲ ಬೊಂಬ್ರಿ, ಚಂದ್ರಪ್ಪ ಗಸ್ತಿ, ರಾಜು ಇರಪನ್ನಗೋಳ, ಬಾಳಪ್ಪ ನಾಯಿಕ, ಬಸವರಾಜ ಬೊಂಬ್ರಿ, ಸಾಗರ ಮನಗುತ್ತಿ, ನಟರಾಜ ಸತ್ಯನ್ನವರ, ತುಂಗಪ್ರಸಾದ, ಪ್ರಕಾಶ ಹರಿಜನ, ಸುನೀತಾ ಬಾಳೇಕುಂದ್ರಿ, ಸಹನಾ ಡಬ್ಬನವರ, ಆಕಾಶ ಅರಬನ್ನವರ, ಲಕ್ಷ್ಮೀತೀರ್ಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net