ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿದೆ ಭಾರತ

2 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಾಲ್ಕು ದಶಕದಲ್ಲಿ ಭಾರತದ ಆರ್ಥಿಕತೆ ಏರುಗತಿಯಲ್ಲಿ ಸಾಗಿದ್ದು, ಕೈಗಾರಿಕೆ, ತಂತ್ರಜ್ಞಾನ, ಕೃಷಿ, ವಿದೇಶಿ ವ್ಯಾಪಾರ, ನವೋದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಏಕಸ್ವಾಮ್ಯ ಸಾಧಿಸುವಲ್ಲಿ ಮಹತ್ತರ ಬೆಳವಣಿಗೆ ಕಂಡಿದೆ ಎಂದು ನವದೆಹಲಿಯ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್ ​ ಪಬ್ಲಿಕ್​ ಸೈನ್ಸ್​ ಆ್ಯಂಡ್​ ಪಾಲಿಸಿಯ ವಿಶ್ರಾಂತ ನಿರ್ದೇಶಕ ಡಾ. ಎಂ. ಗೋವಿಂದರಾವ್​ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯವು ಶಿಕ್ಷಣ ತಜ್ಞರ ದಿನ ನಿಮಿತ್ತ ಕವಿವಿ ಸೆನೆಟ್​ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ. ಡಿ.ಸಿ. ಪಾವಟೆ ಸ್ಮಾರಕ ಮೂಲತತ್ವ ಉಪನ್ಯಾಸ ಕಾರ್ಯಕ್ರಮದಲ್ಲಿ ಶತಮಾನೋತ್ಸವ ವರ್ಷದಲ್ಲಿ ವಿಕಸಿತ ಭಾರತದ ಸುಧಾರಣೆಯ ಅತ್ಯಗತ್ಯ ಕುರಿತು ಮಾತನಾಡಿದರು.
ವಿಶ್ವ ಬ್ಯಾಂಕ್​ ವರದಿ ಪ್ರಕಾರ ಭಾರತ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿರುವ ದೇಶ. 20247ರವರೆಗೆ 5 ಟ್ರಿಲಿಯನ್​ ಆರ್ಥಿಕತೆ ಹೊಂದಿದ ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಲಿದೆ. ಕರೊನಾ ನಂತರದಲ್ಲಿ ದೇಶದ ಜಿಡಿಪಿಯಲ್ಲಿ ಮಹತ್ವದ ಬೆಳವಣಿಗೆ ಕಂಡಿದೆ. ಮುಂದಿನ 25 ವರ್ಷಗಳಲ್ಲಿ ಭಾರತದ ಜಿಡಿಪಿ ಶೇ. 9ರಷ್ಟು ಆಗಲಿದೆ. ಪ್ರಸ್ತುತ ಶೇ. 44ರಷ್ಟು ಜನರು ಕೃಷಿ ಅವಲಂಬಿಸಿದ್ದು, ಶೇ. 42ರಷ್ಟು ಜನರು ಸಣ್ಣ ಉದ್ಯಮಗಳನ್ನು ಅವಲಂಭಿಸಿದ್ದು ಉಳಿದಂತೆ 20 ಜನರು ಉತ್ಪಾದಕತೆ ಕ್ಷೇತ್ರದಲ್ಲಿ ಉದ್ಯೋಗ ಹೊಂದಿದ್ದಾರೆ ಎಂದರು.
ಅಧ್ಯತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ.ಕೆ.ಬಿ. ಗುಡಸಿ ಮಾತನಾಡಿ,ಡಾ.ಡಿ.ಸಿ.ಪಾವಟೆ ದೂರದೃಷ್ಟಿ ಹೊಂದಿದ್ದರು. ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ಪಾವಟೆ ಅವರು ಘನತೆಯನ್ನು ಕೊಟ್ಟರು. ಅವರು ಹಾಕಿ ಕೊಟ್ಟ ದಾರಿಯಲ್ಲಿ ನಡೆಯೋಣ ಎಂದರು.
ಕವಿವಿ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಬಿ.ಎಚ್​. ನಾಗೂರ, ಕವಿವಿ ಕುಲಸಚಿವ ಡಾ. ಎ. ಚೆನ್ನಪ್ಪ, ಡಾ.ಮಲ್ಲಿಕಾರ್ಜುನ ಪಾಟೀಲ, ಡಾ. ನಿಜಲಿಂಗಪ್ಪ ಮಟ್ಟಿಹಾಳ, ಡಾ.ಅಶೋಕ ಹೂಲಿಬಂಡಿ, ಡಾ. ಸಂಜೀವ ಇನಾಮದಾರ, ಡಾ.ಶಿವಾನಂದ ಶೆಟ್ಟರ್​, ಡಾ. ಎನ್​.ಸಿದ್ದಪ್ಪ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net