ಭಾರತ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ

ಹೊಳೆನರಸೀಪುರ  ಪಟ್ಟಣದ ಸರ್ಕಾರಿ ಕಾನೂನು ವಿದ್ಯಾಲಯದಲ್ಲಿ ಸಂವಿಧಾನ ದಿನ ಆಚರಿಸಲಾಯಿತು. ನಿವೇದಿತಾ ಮಹಾಂತೇಶ್ ಮುನವಳ್ಳಿ ಮಠ, ಚೇತನಾ, ಡಾ.ಭಾಗ್ಯಲಕ್ಷ್ಮೀ, ಶಿವಕುಮಾರ್, ಶ್ರೀನಿವಾಸ್ ಇದ್ದರು.
ಹೊಳೆನರಸೀಪುರ ಪಟ್ಟಣದ ಸರ್ಕಾರಿ ಕಾನೂನು ವಿದ್ಯಾಲಯದಲ್ಲಿ ಸಂವಿಧಾನ ದಿನ ಆಚರಿಸಲಾಯಿತು. ನಿವೇದಿತಾ ಮಹಾಂತೇಶ್ ಮುನವಳ್ಳಿ ಮಠ, ಚೇತನಾ, ಡಾ.ಭಾಗ್ಯಲಕ್ಷ್ಮೀ, ಶಿವಕುಮಾರ್, ಶ್ರೀನಿವಾಸ್ ಇದ್ದರು.
Published on

ಹೊಳೆನರಸೀಪುರ: ವಿವಿಧತೆಯಲ್ಲಿ ಏಕತೆ ಹೊಂದಿರುವ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನಿವೇದಿತಾ ಮಹಾಂತೇಶ್ ಮುನವಳ್ಳಿ ಮಠ್ ಹೇಳಿದರು.

ಸಂವಿಧಾನ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಸರ್ಕಾರಿ ಕಾನೂನು ವಿದ್ಯಾಲಯದ ಸಹಯೋಗದಲ್ಲಿ ಇಲ್ಲಿನ ಸರ್ಕಾರಿ ಕಾನೂನು ವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೆ ಕಾನೂನು ದಿನ ಎಂದು ಆಚರಿಸಲಾಗುತ್ತಿತ್ತು. 2015 ರಿಂದ ಅದನ್ನು ಬದಲಾಯಿಸಿ ಸಂವಿಧಾನ ದಿನವೆಂದು ಆಚರಿಸಲಾಗುತ್ತಿದೆ. ಸಂವಿಧಾನ ರಕ್ಷಣೆಯಿಂದ ಭವ್ಯರಾಷ್ಟ್ರದ ಅಭಿವೃದ್ಧಿ ಸಾಧ್ಯ. ಜತೆಗೆ ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ಸಮಾನರು. ಬಸವಾದಿ ಶರಣರು, ದಾಸ ಶ್ರೇಷ್ಠರು, ಅಂಬೇಡ್ಕರ್ ಅವರು ಹೇಳಿರುವಂತೆ ಭಾರತೀಯರೆಲ್ಲರೂ ಸಂವಿಧಾನದಡಿಯಲ್ಲಿ ತಮ್ಮ ಹಕ್ಕುಗಳನ್ನು ಪಡೆಯಲು ಅರ್ಹರು ಎಂದರು.

ಸಿವಿಲ್ ನ್ಯಾಯಾಧೀಶೆ ಚೇತನ ಮಾತನಾಡಿ, ತಾರತಮ್ಯವಿಲ್ಲದೆ ಜೀವನ ನಡೆಸುತ್ತೇವೆ ಎಂದರೆ ಅದಕ್ಕೆ ಕಾರಣ ಸಂವಿಧಾನ. ಇಲ್ಲದಿದ್ದರೆ ಜೀತ ಪದ್ಧತಿ, ಶೋಷಣೆ, ಕಷ್ಟಕರ ಜೀವನ ಮಾಡಬೇಕಾಗುತ್ತಿತ್ತು. ಮಾನವನ ಬದುಕು ಕಟ್ಟುವ ಮೂಲ ಗ್ರಂಥವೇ ಸಂವಿಧಾನ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್ ಮಾತನಾಡಿ, ಸರ್ವರಿಗೂ ಸಮಬಾಳು ಸಮಪಾಲು ಎಂಬ ಧ್ಯೇಯವನ್ನು ಸಂವಿಧಾನ ಕರುಣಿಸಿದೆ. ಸಂವಿಧಾನದಡಿಯಲ್ಲಿರುವ ಅಂಶಗಳನ್ನು ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳುವ ಮೂಲಕ ಸವಲತ್ತುಗಳನ್ನು ಅರ್ಹ ಫಲಾನುಭವಿಗಳು ಹೊಂದಬೇಕು ಎಂದರು.

ಕಾರ್ಯಕ್ರಮದಲ್ಲಿ ವಕೀಲ ಎಸ್.ಎನ್.ಶ್ರೀನಿವಾಸ್, ಕಾಲೇಜು ಪ್ರಾಂಶುಪಾಲ ಡಾ.ಭಾಗ್ಯಲಕ್ಷ್ಮೀ ಮಾತನಾಡಿದರು. ಉಪನ್ಯಾಸ ಕರಾದ ಡಾ.ಮಡಿವಾಳಪ್ಪ ಮಾಡೋಳ್ಳಿ, ಗೀತಾ, ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net