ಭಾರತ ಜಾಗತಿಕ ಜೀವವೈವಿಧ್ಯತೆಯ ತಾಣ : ನಿವೃತ್ತ ಹಿರಿಯ ವಿಜ್ಞಾನಿ ಡಾ.ಟಿ.ತಿಪ್ಪೇಸ್ವಾಮಿ

Protest in Mysore against former MP Ramesh Katti
Published on

ಮೈಸೂರು: ಭಾರತ ಜಾಗತಿಕ ಜೀವವೈವಿಧ್ಯತೆಯ ತಾಣ ಎಂದು ನಗರದ ಕೇಂದ್ರ ರೇಷ್ಮೆ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯ ನಿವೃತ್ತ ಹಿರಿಯ ವಿಜ್ಞಾನಿ ಡಾ.ಟಿ.ತಿಪ್ಪೇಸ್ವಾಮಿ ಹೇಳಿದರು.

ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗ ವತಿಯಿಂದ ಮೈಸೂರು ವಿಜ್ಞಾನ ಪ್ರತಿಷ್ಠಾನ ಸಹಯೋಗದೊಂದಿಗೆ ಇತ್ತೀಚೆಗೆ ಕಾಲೇಜಿನಲ್ಲಿ ವನ್ಯಜೀವಿ ಸಪ್ತಾಹ ಅಂಗವಾಗಿ ‘ಜೀವವೈವಿಧ್ಯತೆ ಮತ್ತು ಅದರ ಸಂರಕ್ಷಣೆ’ ವಿಷಯವಾಗಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಪರಿಸರ ಸಮತೋಲನ ಕಾಪಾಡಲು ಜೀವವೈವಿಧ್ಯತೆಯ ಸಂರಕ್ಷಣೆ ಬಹಳ ಅವಶ್ಯಕ. ಭಾರತವು ಪಶ್ಚಿಮಘಟ್ಟ, ಹಿಮಾಲಯ, ಅಂಡಮಾನ್ ಮತ್ತು ನಿಕೋಬರ್ ನಂತಹ ಸಂಪದ್ಭರಿತ ಜೀವವೈವಿಧ್ಯತೆಯ ತಾಣಗಳನ್ನು ಹೊಂದಿವೆ. ಇವುಗಳ ರಕ್ಷಣೆ ಅತಿ ಅವಶ್ಯಕ. ಜನಸಂಖ್ಯಾಸ್ಫೋಟವು ಜೀವವ್ಯೆವಿಧ್ಯತೆಯ ಮೇಲೆ ತನ್ನ ಪರಿಣಾಮ ಬೀರುವುದರಿಂದ ಜನಸಂಖ್ಯೆ ನಿಯಂತ್ರಣ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ನಗರದ ಮಹಾರಾಜ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಎ.ಎನ್ ಸಂತೋಷ್, ಹೋಮಿಯೋಪತಿ ವೈದ್ಯ ಡಾ. ಎ.ಪಿ.ಸಿ ಅಭಿಜಿತ್, ಪ್ರಾಂಶುಪಾಲ ಡಾ.ರೇಚಣ್ಣ, ಮೈಸೂರು ವಿಜ್ಞಾನ ಪ್ರತಿಷ್ಠಾನ ಅಧ್ಯಕ್ಷ ಸಿ. ಕೃಷ್ಣೇಗೌಡ, ಕಾರ್ದರ್ಶಿ ಜಿ.ಬಿ. ಸಂತೋಷ ಕುಮಾರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net