2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ

h27-bjp 1
Published on

ಹುಬ್ಬಳ್ಳಿ: ಕೋವಿಡ್ ಸಂಕಷ್ಟಕ್ಕೆ ವಿಶ್ವದ ಅನೇಕ ರಾಷ್ಟ್ರಗಳು ತತ್ತರಿಸಿ ಹೋಗಿದ್ದವು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನಿಗಳ ಮೂಲಕ ಕೋವಿಡ್ ಲಸಿಕೆ ಕಂಡುಹಿಡಿದು ಜನರ ಪ್ರಾಣ ಉಳಿಸಿದರು. 2047ಕ್ಕೆ ಆರ್ಥಿಕವಾಗಿ ನಮ್ಮ ದೇಶ ವಿಶ್ವದ ಭೂಪಟದಲ್ಲಿ ಮುಂಚೂಣಿ ರಾಷ್ಟ್ರವಾಗಲು ಪ್ರಧಾನಿಯವರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ನಗರದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ವಿವಿಧ ವಾರ್ಡ್​ಗಳಲ್ಲಿ ಬುಧವಾರ ಏರ್ಪಡಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

ಮೇಕ್ ಇನ್ ಇಂಡಿಯಾ ಮೂಲಕ ಯುದ್ಧಕ್ಕೆ ಬೇಕಾದ ಸಾಮಗ್ರಿ ತಯಾರಿಸಲಾಗಿದೆ. ಮುದ್ರಾ ಯೋಜನೆಯಡಿ ಉದ್ಯೋಗಿಗಳನ್ನು ಸೃಷ್ಟಿಸಲಾಗುತ್ತಿದೆ. ಹೀಗೆ ಬಹಳಷ್ಟು ಯೋಜನೆಗಳು ಬಡವರ ಪಾಲಿಗೆ ಪ್ರಧಾನಿ ನೀಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹು-ಧಾ ಮಹಾನಗರ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಜೋಶಿ ಅವರನ್ನು ಗೆಲ್ಲಿಸೋಣ ಎಂದರು.

ವಿಕಸಿತ ಭಾರತಕ್ಕಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಉಮೇಶಗೌಡ ಕೌಜಗೇರಿ, ಮಲ್ಲಿಕಾರ್ಜುನ ಗುಂಡೂರ, ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ, ಸೀಮಾ ಮೊಗಲಿಶೆಟ್ಟರ್, ಬೀರಪ್ಪ ಖಂಡೆಕರ, ಪ್ರಮುಖರಾದ ಕೃಷ್ಣ ಗಂಡಗಾಳೇಕರ, ಮುಕುಂದಗೌಡ ಗುಗ್ಗರಿ, ಪ್ರಕಾಶ ಕ್ಯಾರಕಟ್ಟಿ, ರವಿ ನಾಯಕ, ಎಚ್.ಎಸ್. ಕಿರಣ, ಅಶೋಕ ವಾಲ್ಮೀಕಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net