ಸಂವಿಧಾನ ಪವಿತ್ರ ಗ್ರಂಥವೆಂದು ಆಧರಿಸುವ ದೇಶ ಭಾರತ

15 hkr 04
Published on

ಹಿರೇಕೆರೂರ: ಭಾರತ ವಿಶ್ವದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಸಂವಿಧಾನದ ಹಕ್ಕು, ಕರ್ತವ್ಯಗಳನ್ನು ಕಾನೂನಿನ ಮೂಲಕ ಸಂವಿಧಾನವನ್ನೇ ಪವಿತ್ರ ಗ್ರಂಥವೆಂದು ಆಧರಿಸುವ ದೇಶವಾಗಿದೆ ಎಂದು ಸಿಇಎಸ್ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಹೇಳಿದರು.


ಪಟ್ಟಣದ ಸಿಇಎಸ್ ವಿದ್ಯಾಸಂಸ್ಥೆಯ ಬಿ.ಆರ್. ತಂಬಾಕದ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಾರತ ಸಂವಿಧಾನ ಪೀಠಿಕೆಯ ಓದು ಸಾಮೂಹಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಇಡೀ ಜಗತ್ತು ಹಿಂದೆಂದೂ ಕಾಣದ ಸಾಂವಿಧಾನಿಕ ವ್ಯವಸ್ಥೆಯನ್ನು ಭಾರತವು 12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರ ಸಾನಿಧ್ಯದಲ್ಲಿ ಅನುಭವ ಮಂಟಪವನ್ನು ಸಂಸತ್ ಆಗಿ ರೂಪಿಸಿಕೊಂಡು ಆ ಮೂಲಕ ಸಮಾನತೆ, ಏಕತೆ, ಜಾತ್ಯಾತೀತತೆ ಹಾಗೂ ಪ್ರತಿಯೊಬ್ಬರೂ ಸಮಾಜದಲ್ಲಿ ಸಮಾನರು ಎಂಬ ವಾತಾವರಣ ರೂಪಿಸಿ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಸ್.ಬಿ. ಚನ್ನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.


ಹಿರಿಯ ಉಪನ್ಯಾಸಕ ಎಸ್.ಎಸ್. ಹುಲ್ಲಿನಕೊಪ್ಪ ಸಂವಿಧಾನದ ಪೀಠಿಕೆ ಓದಿದರು. ಹಿರಿಯ ಉಪನ್ಯಾಸಕರಾದ ಸಿ.ಆರ್.ದೂದೀಹಳ್ಳಿ, ನಾಗರಾಜ ಎಚ್.ಪಿ., ಕಿರಣ ಬಾಗಲರ, ಪಿ.ಎಂ. ವಿಜಯಕುಮಾರ, ರಘುನಾಥ ದೊಡ್ಡಮನಿ, ಪ್ರಶಾಂತ ಎಂ., ಲತಾ ಬಿ.ವೈ., ನವೀನ ಯಲಿಗಾರ, ಸಂತೋಷ ಬಣಕಾರ ಇದ್ದರು. ಉಪನ್ಯಾಸಕರಾದ ಮೋಹನಕುಮಾರ.ಕೆ.ಪಿ., ಕವಿತಾ ಅಣಜಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net