

ಬೆಳಗಾವಿ: ಸರ್ವ ಸಂಪತ್ತಿನ ವೈವಿದ್ಯತೆಯ ಬೀಡಾಗಿರುವ ಭಾರತ ಆರ್ಥಿಕವಾಗಿ ಮಾತ್ರವಲ್ಲದೇ ಸಾಮಾಜಿಕ, ವೈಜ್ಞಾನಿಕ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಇಂದು ವೇಗದಿಂದ ಮುಂದುವರೆಯುತ್ತಿದೆ ಎಂದು ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಬಸವಲಿಂಗಪ್ಪ ಬಿ.ಮಣ್ಣೂರ ಹೇಳಿದರು.
ನಗರದ ಎಮಿನೆಂಟ್ ಕೋಚಿಂಗ್ ಕ್ಲಾಸಿಸ್ನಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ಕೌಜಲಗಿ ಮಾತನಾಡಿ, ಮಕ್ಕಳು ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪಾಲಿಕೆ ಸದಸ್ಯೆ ಸವಿತಾ ಪಾಟೀಲ ಉದ್ಘಾಟಿಸಿದರು. ಇಂಜಿನಿಯರ್ ರೆಹಬರ್ ಡಿ. ಮಾಳಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಭಾಗ್ಯಲಕ್ಷಿ$್ಮ ಕೌಜಲಗಿ, ಚನ್ನಬಸಪ್ಪ ಪಡಗಾನೂರ, ಆಡಳಿತಾಧಿಕಾರಿ ಸದಾನಂದ ಬಡ್ಡೂರ, ಇತರರಿದ್ದರು. ರೂಪಾ ಪಾತಲಿ ಮತ್ತು ಕಮಲಾ ಗೊರಗುದ್ದಿ ಪ್ರಾರ್ಥಿಸಿದರು. ವಾಣಿಶ್ರೀ ದೇವೂರ ಸ್ವಾಗತಿಸಿದರು. ಸದಾನಂದ ಸೋರಗಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷತಾ ಮಹಾಜನ ನಿರೂಪಿಸಿದರು. ಲಕ್ಷಿ$್ಮ ಶಾಬಾದಿ ವಂದಿಸಿದರು.