

ಗಜೇಂದ್ರಗಡ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಭರವಸೆಯ ದೀಪವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ಬಿಜೆಪಿ ರೋಣ ಮಂಡಲ ವತಿಯಿಂದ ಏರ್ಪಡಿಸಿದ್ದ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಅವರು ಮಾತನಾಡಿದರು. ಭಾರತವು ಉಜ್ವಲ ಭವಿಷ್ಯದತ್ತ ಪರಿವರ್ತನೆಗೊಂಡಿದೆ. ಸೇವೆ, ಉತ್ತಮ ಆಡಳಿತ ಮತ್ತು ಬಡ ಜನರ ಕಲ್ಯಾಣದ ಮೇಲೆ ಕೇಂದ್ರೀಕರಿಸುವ ಮೂಲಕ ಅಮೃತ ಕಾಲದ ಕಡೆಗೆ ಭಾರತವು ಪ್ರಯಾಣ ಪ್ರಾರಂಭಿಸಿದೆ. ಸರ್ಕಾರವು ಎಲ್ಲ ವಯಸ್ಸಿನವರ ಪ್ರಯೋಜನಕ್ಕಾಗಿ ಸಮಗ್ರ ವಿಧಾನದೊಂದಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಭಯೋತ್ಪಾದನೆಯ ವಿರುದ್ಧ ಕಠಿಣ ನಿಲುವನ್ನು ತೆಗೆದುಕೊಂಡಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಆರ್.ಕೆ. ಚೌಹಾಣ, ಬಾಳು ಬೋಸ್ಲೆ, ರಮೇಶ ವಕ್ಕರ, ಶಿವಾನಂದ ಮಠದ, ರಾಜೇಂದ್ರ ಘೋರ್ಪಡೆ, ಮುತ್ತಣ್ಣ ಕಡಗದ, ಅಶೋಕ ನವಲಗುಂದ, ಹನಮಂತಪ್ಪ ಹಟ್ಟಿಮನಿ, ಶರಣಪ್ಪ ಕಂಬಳಿ, ಮಹಾಂತೇಶ ಸೋಮನಕಟ್ಟಿ, ಅನೀಲ ಪಲ್ಲೇದ, ಇಂದಿರಾ ತೇಲಿ ಇತರರು ಇದ್ದರು.