

ನುಗ್ಗೇಹಳ್ಳಿ: ಹೋಬಳಿ ಕೇಂದ್ರದ ಗ್ರಾಮ ಪಂಚಾಯಿತಿ ಆವರಣದಲ್ಲಿ 76ನೇ ಗಣರಾಜ್ಯೋತ್ಸವದ ಅಂಗವಾಗಿ ಭಾನುವಾರ ಧ್ವಜಾರೋಹಣ ನೆರವೇರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್. ವಿಠಲ್‌ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಭಾರತದ ಸಂವಿಧಾನವನ್ನು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇಡೀ ವಿಶ್ವವೇ ಗೌರವಿಸಿ ಅನುಸರಿಸುತ್ತಿದೆ. ಭಾರತ ದೇಶ ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಧನೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದೆ ಎಂದರು.
ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಪಿಡಿಒ ಶಿವರಾಂ, ಉಪಾಧ್ಯಕ್ಷೆ ರಾಧಾ ಹರೀಶ್, ಸದಸ್ಯರಾದ ಎನ್.ಆರ್.ಶಿವಕುಮಾರ್, ವಿಜಯಲಕ್ಷ್ಮೀ, ಜಗದೀಶ್, ಎನ್.ಎಸ್.ಮಂಜುನಾಥ್, ಎಚ್.ಜಿ.ಕಿರಣ್ ಗವಿರಂಗಯ್ಯ, ರೇಷ್ಮಾ ಬಾನು ಅಲ್ಲಾಭಕ್ಷಿ, ಗೌಡಕಿ ಮಂಜು, ಶಬೀನಾ ತಾಜ್ ಮೊಹಮ್ಮದ್ ಜಾವಿದ್, ಸವಿತಾ ಯೋಗೇಶ್, ನಟರಾಜ ಯಾದವ್, ಮುಖಂಡರಾದ ಜಾವೀದ್, ಕಾರ್ಯದರ್ಶಿ ಭವಾನಿ, ಸಹ ಕಾರ್ಯದರ್ಶಿ, ರಾಜಕುಮಾರ್, ಬಿಲ್ ಕಲೆಕ್ಟರ್, ನಾಗರಾಜು, ಸೋಮು, ಸಿಬ್ಬಂದಿ ಧರಣಿ ಕುಮಾರ್, ವಾಟರ್‌ಮನ್ ರಾಜಣ್ಣ, ಮಾಸ್ತಿ ಗೌಡ, ಲಕ್ಷ್ಮಣ್, ನಿಂಗರಾಜು, ಗ್ರಂಥಪಾಲಕ ದೇವರಾಜ್, ಸೇರಿದಂತೆ ಇತರರು ಹಾಜರಿದ್ದರು.