

ವಿಜಯಪುರ:ಸನಾತನ ಧರ್ಮ ಉಳಿದರೆ ಮಾತ್ರ ಭಾರತ ದೇಶ ಉಳಿಯಲು ಸಾಧ್ಯ. ಹೀಗಾಗಿ ಸನಾತನ ಹಿಂದು ಧರ್ಮದ ರಣೆಗಾಗಿ, ದೇಶದ ಉಳಿವಿಗಾಗಿ ನಾವೇಲ್ಲರೂ ಒಂದಾಗುವುದು ಅನಿವಾರ್ಯವಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನ ಮುಂಭಾಗದ ಶತಮಾನ ಕಂಡ ಸಂತ, ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಯವರ ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದ ಸೇನೆಯ ಗಜಾನನ ಮಹಾಮಂಡಳ ವತಿಯಿಂದ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಗಣೇಶ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾವೆಲ್ಲರೂ ಜಾತಿ ಜಾತಿಯಿಂದ ಹೊರ ಬಂದು ಒಂದಾಗಬೇಕು. ದಲಿತ ಯುವಕರು ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದಿರುವ ಪುಸ್ತಕಗಳನ್ನು ಓದಿ, ಹಿಂದು ಸಮಾಜದ ಯಾವ ಜಾತಿಯಿಂದಲೂ ದಲಿತ ಸಮುದಾಯದವರಿಗೆ ಅಪಾಯವಿಲ್ಲ. ನೀವು ನಾವು ಕೂಡಿದ್ದರೆ, 2047ಕ್ಕೆ ಹಿಂದು ರಾಷ್ಟ್ರವನ್ನು ಇಸ್ಲಾಂ ರಾಷ್ಟ್ರ ಮಾಡುವ ಹುನ್ನಾರದಿಂದ ತಪ್ಪಿಸಬಹುದು ಎಂದು ತಿಳಿಸಿದರು.
ಮೇಯರ್ ಎಂ.ಎಸ್. ಕರಡಿ, ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಮುಖಂಡರಾದ ಪ್ರತಾಪ ಚಿಕ್ಕಲಕಿ, ಗುರು ಗಚ್ಚಿನಮಠ, ಸಂತೋಷ ತಲಕೇರಿ, ಪ್ರಕಾಶ ಚವ್ಹಾಣ, ವಿಕ್ರಮ ಗಾಯಕವಾಡ ಮಾತನಾಡಿದರು. ಗೋಪಾಲ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.ಸಿದ್ಧೇಶ್ವರ ಸಂಸ್ಥೆ ಉಪಾಧ್ಯ ಸಂಗನಬಸಪ್ಪ ಸಜ್ಜನ, ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಕಿರಣ ಪಾಟೀಲ, ವಿಠಲ ಹೊಸಪೇಟ, ಮಲ್ಲಿಕಾರ್ಜುನ ಗಡಗಿ, ಸ್ವಾಮಿ ವಿವೇಕಾನಂದ ಸೇನೆ ಅಧ್ಯ ಚಂದ್ರು ಚೌದರಿ, ಸ್ವಾಮಿ ವಿವೇಕಾನಂದ ಸೇನೆಯ ಗಜಾನನ ಮಹಾಮಂಡಳದ ಅಧ್ಯ ನಂದು ಗಡಗಿ, ಮುಖಂಡರಾದ ರಾಜು ಜಾಧವ, ಪಾಂಡು ಸಾಹುಕಾರ ದೊಡಮನಿ, ಶಂಕರ ಹೂಗಾರ, ಪ್ರಕಾಶ ಚವಾಣ, ಬಸವರಾಜ ಬಿರಾದಾರ, ಬಾಬು ಶಿರಶ್ಯಾಡ, ರಾಜಶೇಖರ ಬಜಂತ್ರಿ, ಸುನೀಲ ಬೈರವಾಡಗಿ, ಉಮೇಶ ವೀರಕರ ಮತ್ತಿತರರಿದ್ದರು.
ವಿಜಯಪುರದ ಸಿದ್ಧೇಶ್ವರ ದೇವಸ್ಥಾನ ಮುಂಭಾಗದಲ್ಲಿ ಸ್ವಾಮಿ ವಿವೇಕಾನಂದ ಸೇನೆಯ ಗಜಾನನ ಮಹಾಮಂಡಳ ವತಿಯಿಂದ ಹಮ್ಮಿಕೊಂಡಿದ್ದ ಗಣೇಶ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು. ಚಂದ್ರು ಚೌದರಿ, ನಂದು ಗಡಗಿ ಮತ್ತಿತರರಿದ್ದಾರೆ.