ಶಿಕ್ಷಣದಿಂದ ಭಾರತ ನಿರ್ಮಾಣ ಸಾಧ್ಯ

rbk 3-1
ರಬಕವಿಯ ಬ್ರಹ್ಮಾನಂದರ ದೇವಸ್ಥಾನದ ಕಳಸಾರೋಹಣ ಮತ್ತು ಧರ್ಮ ಸಭೆಯಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಡಾ. ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಗುರುಸಿದ್ಧೇಶ್ವರ ಸ್ವಾಮೀಜಿ, ಸಿದ್ದು ಕೊಣ್ಣೂರ, ಡಾ.ಎ.ಬಿ.ನಾಡಗೌಡಪಾಟೀಲ, ಪ್ರಕಾಶ ದೇಸಾಯಿ ಇದ್ದಾರೆ.
Published on

ರಬಕವಿ/ಬನಹಟ್ಟಿ: ಉತ್ತಮ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ಆಧುನಿಕ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಡಾ. ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ರಬಕವಿಯಲ್ಲಿ ಜರುಗುತ್ತಿರುವ ಬ್ರಹ್ಮಾನಂದರ ದೇವಸ್ಥಾನದ ಕಳಸಾರೋಹಣ ಮತ್ತು ಧರ್ಮಸಭೆಯಲ್ಲಿ ಮಾತನಾಡಿದ ಅವರು, ನಾವು ಪುನಃ 12ನೇ ಶತಮಾನದ ವೈಭವ ಕಾಣುತ್ತಿದ್ದೇವೆ. ಶರಣ ಪರಂಪರೆ ಮುಂದುವರಿಯುತ್ತಿದೆ. ಇದಕ್ಕೆ ತೋಂಟದ ಸಿದ್ಧಲಿಂಗ ಸ್ವಾಮೀಜಿ, ಅಥಣಿಯ ಮುರಘೇಂದ್ರ ಸ್ವಾಮೀಜಿ, ಸಿದ್ಧಾರೂಢರು ಮತ್ತು ಬ್ರಹ್ಮಾನಂದ ಗುರುಗಳು ಕಾರಣರಾಗಿದ್ದಾರೆ ಎಂದರು.

ಹಳಿಂಗಳಿಯ ಕಮರಿಮಠದ ಶರಣಬಸವ ದೇವರು ಮಾತನಾಡಿ, ಜೀವನದಲ್ಲಿ ಪರರ ಹಿತ ಕಾಪಾಡುವುದರ ಜತೆಗೆ ಧರ್ಮವಂತರಾಗಿ ನಡೆಯಬೇಕು ಎಂದರು.

ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ, ಸಿದ್ದು ಕೊಣ್ಣೂರ, ಡಾ.ಎ.ಬಿ. ನಾಡಗೌಡಪಾಟೀಲ ಹಾಗೂ ಪ್ರಕಾಶ ದೇಸಾಯಿ ಮಾತನಾಡಿದರು.

ಬೆಳಗ್ಗೆ ದೇವಸ್ಥಾನದ 34 ಕಳಸಗಳನ್ನು ಆರೋಹಣ ಮಾಡಲಾಯಿತು. ಪರಪ್ಪ ಉರಭಿನವರ, ಮಹಾದೇವ ಧೂಪದಾಳ ಗಿರೀಶ ಪಾಟೀಲ, ಸದಾಶಿವ ನಾಯಕ, ರಾಮು ಕಮ್ಮಾರ, ಕೃಷ್ಣಾ ಲೆಂಡಿ, ಗಣಪತಿರಾವ ಹಜಾರೆ, ಸಂಜಯ ತೆಗ್ಗಿ, ಶೇಖರ ಕೊಟ್ರಶೆಟ್ಟಿ, ರಾಮಣ್ಣ ಹುಲಕುಂದ, ನೀಲಕಂಠ ಮುತ್ತೂರ, ಸಂಜಯ ಅಮ್ಮಣಗಿಮಠ, ಧರೆಪ್ಪ ಉಳ್ಳಾಗಡ್ಡಿ, ಮಹಾದೇವಿ ದೇಸಾಯಿ, ಪ್ರಭಾವತಿ ಪಾಲಭಾವಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net