ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ಗೆ ಅಬ್ಬಿನಹೊಳೆ ಗ್ರಾಮದ ಉಲ್ಲಾಸ್

hyr ullas
Published on

ಹಿರಿಯೂರು: ಏರ್​ಜ್ಯಾಕ್ ಎಲೆಕ್ಟ್ರಿಕ್ ಕಾರಿನ ಚಿಕ್ಕ ಮಾದರಿ ತಯಾರಿಸುವ ಮೂಲಕ ತಾಲೂಕಿನ ಅಬ್ಬಿನಹೊಳೆ ಗ್ರಾಮದ ಬಾಲಕ ಉಲ್ಲಾಸ್ ಗೌಡ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ಗೆ ಸೇರ್ಪಡೆಯಾಗಿದ್ದಾರೆ.

ಅಬ್ಬಿನಹೊಳೆಯ ಸುರೇಶ್, ಅನುಪಮ ದಂಪತಿಯ ಪುತ್ರ ಉಲ್ಲಾಸ್, 6 ನೇ ತರಗತಿ ತೇರ್ಗಡೆಯಾಗಿದ್ದು, ಕ್ರಿಯಾತ್ಮಕ ಯಾಂತ್ರಿಕ ಏರ್​ಜ್ಯಾಕ್ ಎಲೆಕ್ಟ್ರಿಕ್ ಕಾರಿನ ಚಿಕ್ಕ ಮಾದರಿ ತಯಾರಿಸಿ ಪ್ರತಿಭೆ ಮೆರೆದಿರುವುದು ಗಮನಾರ್ಹವಾಗಿದೆ.

ಅಪರೂಪದ ಸಾಧನೆಯ ಕಾರಣಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಗೌರವ ದೊರಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net