

ಪುತ್ತೂರು ಗ್ರಾಮಾಂತರ: ಒಂದು ವರ್ಷ 10 ತಿಂಗಳ ಪ್ರಾಯದಲ್ಲೇ ಸಾಮಾನ್ಯ ಜ್ಞಾನ ಹೊಂದಿ ವಿವಿಧ ಪ್ರಾಣಿ, ಪಕ್ಷಿ, ವಾಹನ, ತರಕಾರಿ, ಬಣ್ಣ, ಪರಿಕರಗಳು ಸೇರಿದಂತೆ ವಿವಿಧ ಬಗೆಯ ವಸ್ತುಗಳ ಗುರುತಿಸುವಿಕೆಯೊಂದಿಗೆ ಗಮನಾರ್ಹ ಅರಿವಿನ ಸಾಮರ್ಥ್ಯ ಮೆರೆದಿರುವ ಪಡುವನ್ನೂರು ಗ್ರಾಮದ ಪಡುಮಲೆ ಮೇಗಿನ ಮನೆಯ ಬಾಲೆ ಶ್ಲೋಕ ರೈ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧಕಿಯಾಗಿ ಹೊರಹೊಮ್ಮಿದ್ದಾಳೆ. 25 ಪ್ರಾಣಿಗಳು, 14 ಬಗೆಯ ಹಣ್ಣುಗಳು, 15 ವಾಹನಗಳು, 14 ಪಕ್ಷಿಗಳು, 11 ವಿವಿಧ ಬಣ್ಣಗಳು, 15 ವಿವಿಧ ಬಗೆಯ ತರಕಾರಿಗಳು, 7 ವೃತ್ತಿಪರ ಮತ್ತು 13 ಫ್ಯಾಷನ್ ಪರಿಕರಗಳು, 19 ವಿವಿಧ ಬಗೆಯ ವಸ್ತುಗಳು ಹಾಗೂ 16 ಕ್ರಿಯೆಗಳನ್ನು ಗುರುತಿಸುವ ಮೂಲಕ 1 ವರ್ಷ 10 ತಿಂಗಳ ಪ್ರಾಯದಲ್ಲಿ 25 ತುಣುಕುಗಳ ಜ್ಯಾಮಿತೀಯ ಆಕಾರದ ಒಗಟು ಪೂರ್ಣಗೊಳಿಸಿರುವ ವಿಡಿಯೋ ಆಧರಿಸಿ ಚಿನ್ನದ ಪದಕ, ಪ್ರಮಾಣಪತ್ರ, ಪುಸ್ತಕ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಿಯತಕಾಲಿಕೆಯಲ್ಲಿ ಸ್ಥಾನ ಪಡೆದಿದ್ದಾರೆ. ಈಕೆ ಪಡುಮಲೆ ಮೇಗಿನ ಮನೆ ಲೋಕೇಶ್ ರೈ ಮತ್ತು ಸುಷ್ಮಿತಾ ರೈ ದಂಪತಿ ಪುತ್ರಿ.