

ಹುಬ್ಬಳ್ಳಿ: ಐಕ್ಯೂಎಸಿ ಅಡಿಯಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಇಲ್ಲಿಯ ಜೆ.ಸಿ. ನಗರದ ಎಸ್‌ಜೆಎಂವಿಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಅಮೆರಿಕ ಮತ್ತು ಭಾರತ ಸುಂಕದ ವ್ಯಾಜ್ಯಗಳು; ಭಾರತಕ್ಕೆ ಲಾಭವೋ ಅಥವಾ ನಷ್ಟವೋ, ಕರ್ನಾಟಕದಲ್ಲಿಯ ಸ್ಮಾರ್ಟ್‌ಸಿಟಿ ಮಿಷನ್ ಮೌಲ್ಯಮಾಪನ ವಿಷಯ ಕುರಿತು ರಾಜ್ಯ ಮಟ್ಟದ ಚರ್ಚೆ ಮತ್ತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.
ಧಾರವಾಡ ಕರ್ನಾಟಕ ಕಲಾ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಪ್ರೊ.ವಿ. ಶಾರದಾ ಮಾತನಾಡಿ, ಅಮೆರಿಕಾ ಮತ್ತು ಭಾರತ ಮಧ್ಯದ ತೆರಿಗೆ ವಿಧಿಸುವ ಕ್ರಮ ಜಾಗತಿಕ ಮಟ್ಟದಲ್ಲಿ ಚರ್ಚೆಯಾಯಿತು. ಭಾರತಕ್ಕೆ ರಫ್ತು ಮಾಡುವ ಹಾಗೂ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ತೆರಿಗೆ ವಿಧಿಸುವ ಕ್ರಮವು ಎರಡೂ ರಾಷ್ಟ್ರಗಳ ಮಧ್ಯೆ ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧಗಳ ಮೇಲೆ ಪರಿಣಾಮ ಬೀರಿದೆ. ಇದರಿಂದ ಭಾರತಕ್ಕೆ ಆರ್ಥಿಕವಾಗಿ ಲಾಭವೇ ಹೆಚ್ಚಲಿದೆ. ದೀರ್ಘಾವಧಿಯಲ್ಲಿ ದೇಶೀಯ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಆತ್ಮ ನಿರ್ಭರ ಭಾರತದ ಗುರಿಯಲ್ಲು ಬಲಪಡಿಸಲಿದೆ ಎಂದು ವಿವರಿಸಿದರು.
ಎಸ್‌ಜೆಎಂವಿಎಸ್ ಗೌರವ ಕಾರ್ಯಾಧ್ಯಕ್ಷ ಅರವಿಂದ ಕುಬಸದ ಉದ್ಘಾಟಿಸಿ ಮಾತನಾಡಿದರು.
ಪ್ರಾಚಾರ್ಯ ಡಾ. ಸಿಸಿಲಿಯಾ ಡಿಕ್ರೂಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸ್ಪರ್ಧೆಯಲ್ಲಿ ಎಂಟು ಜಿಲ್ಲೆಗಳ ವಿವಿಧ ಕಾಲೇಜಿನಿಂದ ಆಗಮಿಸಿದ್ದ ಒಟ್ಟು 118 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಡಾ. ಗುರುರಾಜ ನವಲಗುಂದ, ಶಶಾಂಕ.ಬಿ.ಕೆ., ಶಿವಲೀಲಾ ವೈಜೀನಾಥ, ಮಹೇಶ್ವರಿ ಉದಗಟ್ಟಿ, ಕಾವ್ಯ ಸಾಲಿಮಠ ಇತರರು ಇದ್ದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ತಾಯಣ್ಣ ಎಚ್., ಪ್ರೊ. ಶಿವಕುಮಾರ ಪ್ರಭಯ್ಯನವರಮಠ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು. ಡಾ.ಎಚ್.ಆರ್. ಚನ್ನಕ್ಕಿ, ಡಾ. ಮಂಜುನಾಥ ತಲ್ಲೂರ, ವಿದ್ಯಾ ಮನಸೂರ ತೀರ್ಪುಗಾರರಾಗಿ ಆಗಮಿಸಿದ್ದರು. ಅಶ್ವಿನಿ ಇಂದರಗಿ ನಿರೂಪಿಸಿದರು. ಡಾ. ಮಹಾದೇವ ಹರಿಜನ ವಂದಿಸಿದರು.