ವಾಜಪೇಯಿಯಿಂದ ಬಲಿಷ್ಠ ರಾಷ್ಟ್ರವಾದ ಭಾರತ

ತಿ.ನರಸೀಪುರ ಪಟ್ಟಣದ ಹೆಳವರಹುಂಡಿ ವೃತ್ತದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನ ಆಚರಿಸಲಾಯಿತು. ನಗರ್ಲೆ ಎನ್.ಎಂ.ಮಹದೇವಸ್ವಾಮಿ, ಸಿ.ರಮೇಶ್, ಎಸ್.ಕೆ.ಕಿರಣ್, ವೆಂಕಟರಮಣಶೆಟ್ಟಿ, ಲಕ್ಷ್ಮೀ, ಕುಮಾರ್, ನಾಗಣ್ಣ, ನಂದೀಶ್ ಇದ್ದರು.
ತಿ.ನರಸೀಪುರ ಪಟ್ಟಣದ ಹೆಳವರಹುಂಡಿ ವೃತ್ತದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನ ಆಚರಿಸಲಾಯಿತು. ನಗರ್ಲೆ ಎನ್.ಎಂ.ಮಹದೇವಸ್ವಾಮಿ, ಸಿ.ರಮೇಶ್, ಎಸ್.ಕೆ.ಕಿರಣ್, ವೆಂಕಟರಮಣಶೆಟ್ಟಿ, ಲಕ್ಷ್ಮೀ, ಕುಮಾರ್, ನಾಗಣ್ಣ, ನಂದೀಶ್ ಇದ್ದರು.
Published on

ತಿ.ನರಸೀಪುರ: ಶಿಕ್ಷಣಕ್ಕೆ ಒತ್ತು ನೀಡುವುದರೊಂದಿಗೆ ಗ್ರಾಮೀಣಾಭಿವೃದ್ಧಿಗೂ ಆದ್ಯತೆ ನೀಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಿದರು ಎಂದು ವರುಣ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಸಂಚಾಲಕ ನಗರ್ಲೆ ಎನ್.ಎಂ.ಮಹದೇವಸ್ವಾಮಿ ಹೇಳಿದರು.

ಪಟ್ಟಣದ ಹೆಳವರಹುಂಡಿ ವೃತ್ತದಲ್ಲಿ ಬುಧವಾರ ಭೈರಾಪುರ ಶಕ್ತಿ ಕೇಂದ್ರ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100 ನೇ ವರ್ಷದ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಾಜಪೇಯಿ ಹಾಗೂ ನರೇಂದ್ರ ಮೋದಿ ಅವರಂತಹ ನಾಯಕರು ದೇಶ ಕಟ್ಟುವ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಗ್ರಾಮಕ್ಕೊಂದು ಮದ್ಯದ ಅಂಗಡಿಗಳನ್ನು ತೆರೆದು ಸಮಾಜವನ್ನೇ ಹಾಳು ಮಾಡಲು ಹೊರಟಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಮಾತನಾಡಿ, ಕೆಲವರು ಹಾಗೂ ರಾಜಕೀಯ ಪಕ್ಷವೊಂದಕ್ಕೆ ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್ ಹೊಟ್ಟೆಪಾಡಾಗಿದ್ದಾರೆ. ಇಬ್ಬರೂ ಮಹಾನಾಯಕರನ್ನು ಬಿಟ್ಟರೆ ಅಟಲ್ ಬಿಹಾರಿ ವಾಜಪೇಯಿ ಅವರೇ ದೇಶ ಕಂಡ ಮೇರು ನಾಯಕ. ವಾಜಪೇಯಿ ಅವರ ಗರಡಿಯಲ್ಲಿ ಪಳಗಿದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದೊಂದು ದಶಕದಿಂದ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಪಕ್ಷದ ಮುಖಂಡ ಬಾಲಕೃಷ್ಣ ಮಾತನಾಡಿದರು. ಪುರಸಭೆ ಸದಸ್ಯ ಎಸ್.ಕೆ.ಕಿರಣ್, ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮೀ, ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಆಲಗೂಡು ಮಂಜು, ಭೈರಾಪುರ ಶಕ್ತಿ ಕೇಂದ್ರದ ಅಧ್ಯಕ್ಷ ನಂದೀಶ್, ಮುಖಂಡರಾದ ವೆಂಕಟರಮಣಶೆಟ್ಟಿ, ಗೌಡ್ರು ಕುಮಾರ್, ನಾಗಣ್ಣ, ಅಡಿಗೆ ಪ್ರಭು, ಸುರೇಶ್, ಮೂರ್ತಿ, ಪಿ.ಮಹದೇವ, ಮಹೇಂದ್ರ, ಮಹದೇವಸ್ವಾಮಿ, ಗಾರೆ ಲೋಕೇಶ್, ಕಾಪು ಕುಮಾರ್, ಪಾಂಡು, ಮೋಹನ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net