ಸಿದ್ದರಾಮಯ್ಯ ಹಿಂದು ವಿರೋಧಿ

INDI 23-2
ಭೀಮಸಿಂಗ್ ರಾಠೋಡ, ಶಾಂತು ಕಂಬಾರ, ಕುಮಾರ ರಾಠೋಡ ಇತರರಿದ್ದರು.
Published on

ಇಂಡಿ: ವೀರ ಸಾವರ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಾಂಗ್ರೆಸ್ ಪಕ್ಷದ ನಡೆ ಖಂಡನೀಯವಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯನವರು ಹಿಂದು ವಿರೋಧಿಯಾಗಿದ್ದಾರೆ. ಮಾಂಸ ತಿಂದು ದೇವಸ್ಥಾನ ಪ್ರವೇಶಿಸುವ ಮೂಲಕ ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ರಾಜ್ಯದಲ್ಲಿ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿ ಅದರ ಪರಿಣಾಮವನ್ನೂ ಅನುಭವಿಸಿದ್ದಾರೆ. ಈಗ ವೀರಶೈವ ಸಮಾಜದ ಜಗದ್ಗುರುಗಳ ಹತ್ತಿರ ಧರ್ಮ ಒಡೆಯುವ ವಿಚಾರದ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಈಗ ಸಾವರ್ಕರ್ ಸ್ವಾಂತಂತ್ರೃಕ್ಕಾಗಿ ಹೋರಾಡಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಅವರು ಹಿಂದು ವಿರೋಧಿ ಎಂಬುದು ಗೊತ್ತಾಗುತ್ತಿದೆ ಎಂದರು.

ಬರುವ ಗಣೇಶೋತ್ಸವದಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದರೊಂದಿಗೆ ಸಾವರ್ಕರ್ ಅವರ ಭಾವಚಿತ್ರವನ್ನಿಟ್ಟು ಜಿಲ್ಲೆಯ ಜನತೆ ಪೂಜೆ ಮಾಡಬೇಕೆಂದು ವಿನಂತಿಸಿದರಲ್ಲದೆ, ವೀರ ಸಾವರ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ನಾನು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.

ಸೋಮಶೇಖರ ದೇವರ, ಪುರಸಭೆ ಸದಸ್ಯ ವಿಜಯಕುಮಾರ ಮೂರಮನ್, ಭೀಮಸಿಂಗ್ ರಾಠೋಡ, ಶಾಂತು ಕಂಬಾರ, ಕುಮಾರ ರಾಠೋಡ, ದಯಾನಂದ ಮಸಳಿ, ರಮೇಶ ಧರೇನವರ, ಶಾಂತು ಬಿರಾದಾರ, ಶರಣಗೌಡ ಬಂಡಿ, ಮಲ್ಲನಗೌಡ ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net