

ಇಂಡಿ: ನಶಿಸಿಹೋಗುತ್ತಿರುವ ಅಪರೂಪದ ದೇಶಿ ಖಿಲಾರಿ ತಳಿಯ ಕೇವಲ ಏಳು ದಿನದ ಮರಿಯೊಂದು ಎರಡು ಲಕ್ಷ ರೂಪಾಯಿಗೆ ಮಾರಾಟವಾಗಿ ಆಶ್ಚರ್ಯಮೂಡಿಸಿದೆ.
ಇಂಡಿಯ ಬಾನಪ್ಪ ಮಾಸ್ತರ ಪೂಜಾರಿ ಮಾಂಸಕ್ಕಾಗಿ ಹಾಗೂ ಬೀಜಕ್ಕಾಗಿ ವಿಶೇಷ ತಳಿಯ ಕಿಲಾರಿ ತಳಿಯ ಟಗರುಗಳನ್ನು ಸಾಕುತ್ತಿದ್ದು, ಅದರ ಕೇವಲ ಏಳು ದಿನದ ಮರಿ ‘ಸುಲ್ತಾನ’ ನನ್ನು ಮಹಾರಾಷ್ಟ್ರದ ಜತ್ತ ತಾಲೂಕಿನ ಸಿದ್ಧನಾಥ ಗ್ರಾಮದ ನಾಮದೇವ ಖೋಖರೆ ಎಂಬುವವರು ಎರಡು ಲಕ್ಷ ರೂ. ಕೊಟ್ಟು ಖರೀದಿ ಮಾಡಿದ್ದಾರೆ.
ಈ ಟಗರು ಮರಿಯ ತಂದೆಗೆ ಮೂವತ್ತು ಲಕ್ಷ ರೂ.ಗೆ ಬೇಡಿಕೆ ಇದ್ದರೂ, ಬಾನಪ್ಪ ಅವರು ಕೊಟ್ಟಿಲ್ಲವಂತೆ. ಪಟ್ಟಣದಲ್ಲಿ ಸುಲ್ತಾನನ್ನು ಹೊತ್ತುಕೊಂಡು ಡೋಲು, ಬ್ಯಾಂಡ್ ಬಾರಿಸುತ್ತಾ ಮೆರವಣಿಗೆ ಮಾಡಿದ್ದು ಗಮನಸೆಳೆಯಿತು.
ಮುಧೋಳದ ಹೌಂಡ್ ಜಾತಿ ಶ್ವಾನದಂತೆ, ಉಣ್ಣೆಯ ಕಿಲಾರಿ ಟಗರು ಖ್ಯಾತಿಪಡೆದಿದ್ದು, ನೋಡಲು ಮುಖದಲ್ಲಿ ಕುಡುಗೋಲಿನಾಕಾರವಿದ್ದು, ಗಿಳಿ ಮೂಗನ್ನು ಹೊಂದಿದೆ. ಆದರೆ ಇತ್ತೀಚೆಗೆ ಈ ತಳಿಗಳು ನಶಿಸುತ್ತಿದ್ದು ಅದನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದು.
ಬಾನಪ್ಪ ಪೂಜಾರಿ, ಸುಲ್ತಾನ ಕುರಿ ಮರಿ ಮಾಲೀಕ