ನಿವೃತ್ತ ಸೇನಾಧಿಕಾರಿಗೆ ಸನ್ಮಾನ

VJP 18-9
Published on

ವಿಜಯಪುರ: ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಇಂಡಿ ತಾಲೂಕಿನ ಶಿರಕನಹಳ್ಳಿ ಗ್ರಾಮದ ಮಲ್ಲಿಕಾರ್ಜುನ ಭೀ. ನಾವಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.

22 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಘೋಷಿಸಿ ಗ್ರಾಮಕ್ಕೆ ಬಂದ ಮಲ್ಲಿಕಾರ್ಜುನ ಅವರನ್ನು ಆದರದಿಂದ ಬರಮಾಡಿಕೊಳ್ಳಲಾಯಿತು. ಪ್ರಭುದೇವರ ಬೆಟ್ಟದ, ಪೂಜಪ್ಪ ಮುತ್ಯಾ, ಜೇವೂರ ಮುತ್ಯಾ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಶ್ರೀಮಂತ ಲೋಣಿ, ನಿವೃತ್ತ ಸೈನಿಕ ಎಂ.ಎಂ. ಲೋಣಿ, ರಾಘು ಚಟ್ಟರಕಿ, ಲಕ್ಷ್ಮಣ ಡೊಮನಾಳ, ಪರುಶುರಾಮ ಹಟ್ಟಿ, ಎಸ್.ಎರ್ ಕೆಂಭಾವಿ, ಮಲ್ಲು ಲೋಣಿ, ಶಿವಕುಮಾರ ನಾವಿ, ಶ್ರೀಕಾಂತ ಲೋಣಿ, ಜಟ್ಟು ಬಿರಾದಾರ, ಲಕ್ಷ್ಮಣ ಹಲಸಂಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net